ಮನೆಯಂತೆ ಪರಿಸರ ಶುಚಿತ್ವವೂ ಮುಖ್ಯ

HNL SWACHHATE
Published on

ಹಾನಗಲ್ಲ: ಸ್ವಚ್ಛತೆ ನಮ್ಮೆಲ್ಲರ ಆದ್ಯತೆಯಾಗಬೇಕು. ಮನೆಗಳ ಶುಚಿತ್ವದೊಂದಿಗೆ ಪರಿಸರದ ಶುಚಿತ್ವವೂ ಬಹುಮುಖ್ಯ. ಇದೆಲ್ಲವೂ ಸಾಮೂಹಿಕ ನಿರ್ವಹಣೆಯಿಂದ ಮಾತ್ರ ಸಾಧ್ಯ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಸಂಯೋಜಕ ರಾಘವೇಂದ್ರ ಪಟಗಾರ ಹೇಳಿದರು.

ಪಟ್ಟಣದ ಕುಂಬಾರ ಓಣಿಯಲ್ಲಿ ಇತ್ತೀಚೆಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ವಿವಿಧ ಮಹಿಳಾ ಸಂಘಗಳ ಪ್ರತಿನಿಧಿಗಳು ನಡೆಸಿದ ದೇವಸ್ಥಾನ ಹಾಗೂ ವಠಾರ ಸ್ವಚ್ಛತಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪುರಸಭೆ ಅಧ್ಯಕ್ಷೆ ಮಮತಾ ಆರೇಗೊಪ್ಪ, ಮುಖ್ಯಾಧಿಕಾರಿ ವೈ.ಕೆ. ಜಗದೀಶ ಮಾತನಾಡಿ, ಸಾರ್ವಜನಿಕರು, ಸಂಘ-ಸಂಸ್ಥೆಗಳ ಸಹಭಾಗಿತ್ವವಿದ್ದರೆ ನಮ್ಮ ಊರನ್ನು ಆರೋಗ್ಯವಾಗಿಡಲು ಸಾಧ್ಯ ಎಂದರು.

ಧರ್ಮಸ್ಥಳ ಸಂಸ್ಥೆ ಮೇಲ್ವಿಚಾರಕಿ ನೇತ್ರಾವತಿ ಮಂಡಿಗನಾಳ, ಸೇವಾ ಪ್ರತಿನಿಧಿ ನಾಗರತ್ನಾ ಅಪ್ಪಾಜಿ, ಸುಜಾತಾ ಹಳೇಕೋಟಿ, ಲಲಿತಮ್ಮ ಶೇಷಗಿರಿ ಹಾಗೂ ಒಕ್ಕೂಟದ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net