

ಬೆಟ್ಟದಪುರ: ಬೆಟ್ಟದಪುರ ಸಮೀಪದ ಚಪ್ಪರದಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ. ಟ್ರಸ್ಟ್ ವತಿಯಿಂದ ಪರಿಸರ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸಿ.ಎ.ನಂದೀಶ್ ಮಾತನಾಡಿ, ಪರಿಸರ ಕಾಳಜಿಯ ಜತೆಗೆ ಸುಸ್ಥಿರ ಅಭಿವೃದ್ಧಿಯು ಸಮಾಜಕ್ಕೆ ಮುಖ್ಯ. ಈ ಹಿನ್ನೆಲೆ ನಾವೆಲ್ಲರೂ ಪರಿಸರ ಉಳಿಸಿ ಬೆಳೆಸುವ ಕಾರ್ಯದಲ್ಲಿ ತೊಡಗಬೇಕು. ಪ್ರತಿಫಲ ಬಯಸದೆ ನಮಗೆ ಪರಿಸರ ಸಾಕಷ್ಟು ನೀಡುತ್ತಿದೆ. ಆದರೆ ನಾವು ಪರಿಸರವನ್ನು ಹಾಳು ಮಾಡುವುದು ಎಷ್ಟು ಸರಿ? ಹಾಗಾಗಿ ವಿದ್ಯಾರ್ಥಿಗಳು ಈ ಬಗ್ಗೆ ಅರಿತು ಪರಿಸರ ಉಳಿಸಲು ಹೆಚ್ಚಿನ ಆಸಕ್ತಿ ತೋರಿಸಬೇಕು ಎಂದರು.
ಈ ವೇಳೆ ಮಕ್ಕಳಿಗೆ ಪರಿಸರ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸ್ಪರ್ಧೆ ಆಯೋಜಿಸಿ, ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು. ಮಹಿಳಾ ಸಂಘದ ಒಕ್ಕೂಟದ ಅಧ್ಯಕ್ಷೆ ಜಯಲಕ್ಷ್ಮೀ, ಶಾಲಾ ಮುಖ್ಯಶಿಕ್ಷಕ ಶಿವಾನಂದ್, ಕೃಷಿ ಮೇಲ್ವಿಚಾರಕ ಪಿ.ವಿನಾಯಕ್, ಮುಖಂಡ ಗಿರೀಶ್, ಸೇವಾ ಪ್ರತಿನಿಧಿ ವೀಣಾ, ಶಿಕ್ಷಕರಾದ ಎಸ್.ಮಹೇಶ್, ಗಾಲಿಸಬ್ ಬಾಗಲಕೋಟೆೆ, ವಿದ್ಯಾರ್ಥಿಗಳು ಇದ್ದರು.