

ಹಿರಿಯೂರು: ನಗರಸಭೆ ವತಿಯಿಂದ ಸೋಮವಾರ ಸ್ವಚ್ಛ ಭಾರತ್ ಮಿಷನ್ ಯೋಜನೆಯ ಪ್ಲಾಸ್ಟಿಕ್ ಮುಕ್ತ ಕಾರ್ಯಕ್ರಮದಡಿ ಪೌರಾಯುಕ್ತ ಎಚ್.ಮಹಾಂತೇಶ್, ವಾಗ್ದೇವಿ ಶಾಲೆಯ ವಿದ್ಯಾರ್ಥಿಗಳ ಸಹಯೋಗದೊಂದಿಗೆ ನೆಹರು ಮೈದಾನದಲ್ಲಿ ಈಚೆಗೆ ಜಾಗೃತಿ ಜಾಥಾ ನಡೆಸಿ ಮಾನವ ಸರಪಳಿ ರಚಿಸಿ ಸಾರ್ವಜನಿಕರ ಗಮನ ಸೆಳೆದರು. ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಸುನೀಲ್ ಕುಮಾರ್, ವೈ.ಎಸ್.ಸಂಧ್ಯಾ, ಜಿ.ಮೀನಾಕ್ಷಿ, ಕಿರಿಯ ಆರೋಗ್ಯ ನಿರೀಕ್ಷಕ ಅಶೋಕ್ ಕುಮಾರ್, ಮಹಾಲಿಂಗ ರಾಜು ಇತರರಿದ್ದರು.