ಪರಿಸರ ನಾಶದಿಂದ ಭವಿಷ್ಯಕ್ಕೆ ಕುತ್ತು : ಪರಿಸರವಾದಿ ದಿನೇಶ್ ಹೊಳ್ಳ ಕಳವಳ

New Project (1)
Published on

ಸುಳ್ಯ: ಆಧುನೀಕರಣದ ಭರಾಟೆಯಲ್ಲಿ ಪರಿಸರ ನಾಶವಾಗುತ್ತಿದ್ದು, ಇದು ವನ್ಯಜೀವಿಗಳ ಹಾಗೂ ಮಾನವನ ಭವಿಷ್ಯಕ್ಕೆ ಕುತ್ತು ತಂದಿದೆ ಎಂದು ಪರಿಸರವಾದಿ ದಿನೇಶ್ ಹೊಳ್ಳ ಹೇಳಿದರು.

ಸುಳ್ಯದ ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸುಳ್ಯ ತಾಲೂಕು ಘಟಕದ ವತಿಯಿಂದ ಪರಿಸರ ಜಾಗೃತಿಯಾನ -ಪರಿಸರ ಗೀತೆ ಗಾಯನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸ್ನೇಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಚಂದ್ರಶೇಖರ ದಾಮ್ಲೆ ಉದ್ಘಾಟಿಸಿದರು. ಸುಳ್ಯ ಘಟಕ ಅಧ್ಯಕ್ಷ ಚಂದ್ರಶೇಖರ ಪೇರಾಲು ಅಧ್ಯಕ್ಷತೆ ವಹಿಸಿದ್ದರು.

ದ.ಕ ಜಿಲ್ಲಾ ಕಸಾಪ ಕಾರ್ಯಕಾರಿಣಿ ಸದಸ್ಯ ರಾಮಚಂದ್ರ ಪಲ್ಲತಡ್ಕ ಮಾತನಾಡಿದರು. ಸಂಧ್ಯಾ ಮಂಡೆಕೋಲು ಕನ್ನಡ ನಾಡು ನುಡಿ ಮತ್ತು ಪರಿಸರಕ್ಕೆ ಸಂಬಂಧಿಸಿದ ಗೀತಾ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.

ಪ್ರೌಢಶಾಲಾ ವಿಭಾಗದಲ್ಲಿ ವಿದ್ಯುಲತಾ ಪಿ. - ಪ್ರಥಮ, ಗಿರೀಶ - ದ್ವಿತೀಯ ಬಹುಮಾನ ಪ್ರಾಥಮಿಕ ವಿಭಾಗದಲ್ಲಿ ದಿಶಾಂತ್ ಬಿ.ಜಿ. - ಪ್ರಥಮ, ಸಾನಿಕ ಎ.ಪಿ. - ದ್ವಿತೀಯ ಬಹುಮಾನ ಪಡೆದುಕೊಂಡರು. ಕಸಾಪ ಸದಸ್ಯೆ ಶಶ್ಮಿ ಭಟ್ ಅಜ್ಜಾವರ ಉಪಸ್ಥಿತರಿದ್ದರು.

ಸ್ನೇಹ ಶಾಲಾ ಮುಖ್ಯ ಶಿಕ್ಷಕಿ ಜಯಲಕ್ಷ್ಮೀ ದಾಮ್ಲೆ ಸ್ವಾಗತಿಸಿದರು. ದೇವಿಪ್ರಸಾದ ಜಿ.ಸಿ. ಕಾಯರ್ತೋಡಿ ನಿರೂಪಿಸಿದರು. ತೇಜಸ್ವಿ ಕಡಪಳ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net