ಪರಿಸರ ಸಂರಕ್ಷಣೆ- ವಿಜ್ಞಾನ ಜಾಗೃತಿ ಜಾಥಾ

27-KLG-2 JATHA
Published on

ಕಲಘಟಗಿ: ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಪಟ್ಟಣದ ಜಿ.ಇ. ಸಂಯುಕ್ತ ಪದವಿಪೂರ್ವ ಕಾಲೇಜ್ ಮತ್ತು ಗರ್ಲ್ಸ್ ಇಂಗ್ಲಿಷ್ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಪರಿಸರ ಸಂರಕ್ಷಣೆ-ಪರಿಸರ ವಿಜ್ಞಾನ ಕುರಿತು ಮಂಗಳವಾರ ಜಾಗೃತಿ ಜಾಥಾ ನಡೆಯಿತು.

ಜಾಥಾದಲ್ಲಿ ಜಿ.ಇ. ಸಂಯುಕ್ತ ಪದವಿಪೂರ್ವ ಕಾಲೇಜ್​ನ ಒಟ್ಟು 48 ಕೆಡೆಟ್ಸ್ ಮತ್ತು ಗರ್ಲ್ಸ್ ಇಂಗ್ಲಿಷ್ ಪ್ರೌಢ ಶಾಲೆಯ ಒಟ್ಟು 48 ಕೆಡೆಟ್ಸ್, 5 ಕರ್ನಾಟಕ ಗರ್ಲ್ಸ್ ಬಟಾಲಿಯನ್ ಎಎನ್​ಒಗಳ ಮಾರ್ಗದರ್ಶನದಲ್ಲಿ ಪಟ್ಟಣದ ಕಾನಹೊಂಡ ಕೆರೆಯ ಸ್ವಚ್ಛತೆ ಮತ್ತು ಪರಿಸರ ಕುರಿತು ವಿವಿಧ ಘೊಷಣೆಗಳೊಂದಿಗೆ ಜಾಗೃತಿ ಜಾಥಾ ಮೂಡಿಸಲಾಯಿತು.

ಎನ್.ಸಿ.ಸಿ ಅಧಿಕಾರಿಗಳಾದ ಸೀನಿಯರ್ ವಿಂಗ್ ಲೆಫ್ಟಿನೆಂಟ್ ಅನ್ನಪೂರ್ಣಾ ಘಾಳಿ, ಜೂನಿಯರ್ ವಿಂಗ್ ಫಸ್ಟ್ ಆಫೀಸರ್ ಎಸ್.ಡಿ. ಹಾದಿಮನಿ, ಹವಾಲ್ದಾರ ಪ್ರವೀಣ ಪಾಟೀಲ, ಹವಾಲ್ದಾರ ಫಕ್ರು ಟಿ. ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net