ಪರಿಸರ ರಕ್ಷಣೆ ನಮ್ಮ ಹೊಣೆ

12ATHANIGRAMIN1
Published on

ಅಥಣಿ ಗ್ರಾಮೀಣ: ಮಾನವ ನಿರ್ಮಿತ ಕಲ್ಮಶದ ವಾತಾವರಣದಿಂದ ಪಾರಾಗಲು ಹಸಿರೀಕರಣ ಒಂದೇ ದಾರಿ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಅಥಣಿ ತಾಲೂಕಿನ ರಡ್ಡೇರಹಟ್ಟಿ ಗ್ರಾಮದ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಅಭಿನವ ಶಿಕ್ಷಣ ಹಾಗೂ ಸಮಾಜ ಸೇವಾ ಸಂಸ್ಥೆ, ಸರ್ಕಾರಿ ಪ್ರೌಢಶಾಲೆ, ಹಿರಿಯ ಪ್ರಾಥಮಿಕ ಶಾಲೆ ರಡ್ಡೇರಹಟ್ಟಿ, ಅರಣ್ಯ ಇಲಾಖೆ ಅಥಣಿ ಹಾಗೂ ಗ್ರಾಪಂ ಇವರ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವನಮಹೋತ್ಸವ ಕಾರ್ಯಕ್ರಮ ಸಸಿ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿ, ಪರಿಸರ ನಾಶದಿಂದ ತಾಪಮಾನ ಹೆಚ್ಚಳವಾಗಿ, ಮಳೆ ಪ್ರಮಾಣ ಕಡಿಮೆಯಾಗುತ್ತದೆ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿ ಪರಿಸರ ಕುರಿತು ಕಾಳಜಿ ವಹಿಸಿ

ಗಿಡ-ಮರ ಬೆಳೆಸಬೇಕು ಎಂದರು.

ಪ್ರತಿ ವಿದ್ಯಾರ್ಥಿ, ಗ್ರಾಪಂ ಸದಸ್ಯರು ಮತ್ತು ಸಾರ್ವಜನಿಕರು ಸಸಿಗಳನ್ನು ದತ್ತು ಪಡೆದು ಗಿಡಮರ ಬೆಳೆಸಬೇಕು. ತಾಲೂಕಿನ ರೈತರ ಮಕ್ಕಳ ಕೃಷಿ ಶಿಕ್ಷಣಕ್ಕಾಗಿ ತಾಲೂಕಿನಲ್ಲಿ ಕೃಷಿ ಮಹಾವಿದ್ಯಾಲಯ ನಿರ್ಮಿಸಲಾಗುತ್ತಿದೆ. ಜು.18ರಂದು ಕೃಷಿ ತಜ್ಞರ ತಂಡದಿಂದ ಪರಿಶೀಲನೆ ನಡೆಯಲಿದ್ದು, ಜನವರಿ 2026 ಕೊನೆಯ ವಾರದಲ್ಲಿ ಭೂಮಿಪೂಜೆ ನೇರವೇರಿಸಿ, ಶೀಘ್ರ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು.

ಮಹಾದೇವ ನಾಯಿಕ ಮಾತನಾಡಿದರು. ರಡ್ಡೇರಟ್ಟಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 315, ದೇವಿ ವನದಲ್ಲಿ 200 ಹಾಗೂ ಗ್ರಾಮದ ರಸ್ತೆ ಬದಿ 300 ಸಸಿ ನೆಟ್ಟು ವಿದ್ಯಾರ್ಥಿಗಳಿಗೆ ಹಾಗೂ ಗ್ರಾಪಂ ಸದಸ್ಯರಿಗೆ ದತ್ತು ನೀಡಲಾಯಿತು.

ಎಸ್‌ಡಿಎಂಸಿ ಅಧ್ಯಕ್ಷ ಸಿದ್ದರಾಯ ದೇವರೆಡ್ಡಿ, ಮಹಾದೇವ ಗಲಗಲಿ, ಭೀಮಾಶಂಕರ ಶಿರಗೂರ, ದುರಂದರ ಭೋಸಲೆ, ನಿಂಗಯ್ಯ ನಾಯಿಕ, ಹನುಮಂತ ಬೆಳ್ಳಂಕಿ, ತುಕಾರಾಮ ಬಾಗೇಣ್ಣವರ, ಈಶ್ವರಯ್ಯ ಎಮ್ಮಾವೇಶ್ವರ, ಧನೇಶ್ವರ ಖೋತ, ಶಿವಾನಂದ ಗಲಗಲಿ, ಶ್ರೀಕಾಂತ ಭೋಸಲೆ, ಅರಣ್ಯ ಅಧಿಕಾರಿ ರಾಕೇಶ ಅರ್ಜುನವಾಡ, ಬಿಇಒ ಮಹಾದೇವ ಮುಂಜೆ, ಎಸ್.ಎ.ಮಡ್ಡಿ, ಮಲ್ಲಿಕಾರ್ಜುನ ಬಡಿಗೇರ, ಹನುಮಂತ ಮೂಡಲಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net