ಪರಿಸರ ಮಾಲಿನ್ಯ ಪಟಾಕಿ ಬಳಕೆ ಸಲ್ಲ

10 KAMPLI 02
ಕಂಪ್ಲಿ ಪುರಸಭೆಯಲ್ಲಿ ಜರುಗಿದ ಸ್ವಚ್ಛ ದೀಪಾವಳಿ ಶುಭ ದೀಪಾವಳಿ ಅಭಿಯಾನದಲ್ಲಿ ಸಿಒ ಕೆ.ದುರುಗಣ್ಣ ಮಾತನಾಡಿದರು. ಆರೋಗ್ಯ ನಿರೀಕ್ಷಕರಾದ ಪ್ರಕಾಶ್‌ಬಾಬು, ಜೀವನ್‌ಸ್ವಾತಿ, ಸಮುದಾಯ ಸಂಘಟನಾಧಿಕಾರಿ ಎಂ.ವಸಂತಮ್ಮ ಇದ್ದಾರು.
Published on

ಕಂಪ್ಲಿ: ದೀಪಾವಳಿ ಬೆಳಕು ಮತ್ತು ಜ್ಞಾನದ ಹಬ್ಬವಾಗಬೇಕು ಹೊರೆತು ಪರಿಸರ ಮಾಲಿನ್ಯ ಉಂಟು ಮಾಡುವ ಹಬ್ಬವಾಗಬಾರದು ಎಂದು ಪುರಸಭೆ ಮುಖ್ಯಾಧಿಕಾರಿ ಕೆ.ದುರುಗಣ್ಣ ಹೇಳಿದರು.

ಇಲ್ಲಿನ ಪುರಸಭಾಂಗಣದಲ್ಲಿ ಶುಕ್ರವಾರ ಸ್ವಚ್ಛ ದೀಪಾವಳಿ ಶುಭ ದೀಪಾವಳಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ದೀಪಾವಳಿಯನ್ನು ಪರಿಸರಸ್ನೇಹಿ ಹಬ್ಬವನ್ನಾಗಿ ಆಚರಿಸಿ. ಶಬ್ದ, ಬೆಳಕು, ವಾಯು, ಜಲ ಮಾಲಿನ್ಯವಾಗದ ಪಟಾಕಿಗಳನ್ನೇ ಬಳಸಿ.

ಹಾನಿಕಾರಕ ಪಟಾಕಿಗಳ ಬಳಕೆ ಸಲ್ಲದು. ಸರ್ಕಾರ ಸೂಚಿಸಿದ ಹಸಿರು ಪಟಾಕಿಗಳನ್ನೇ ಬಳಸಬೇಕು. ಪಟಾಕಿ ಬಳಸುವಾಗ ಯಾವುದೇ ಜೀವಿಯ ದೇಹಕ್ಕೆ, ಸಾರ್ವಜನಿಕ ಆಸ್ತಿಗಳಿಗೆ ಹಾನಿಯಾಗದಂತೆ ಕಟ್ಟೆಚ್ಚರವಹಿಸುವಂತೆ ಸಲಹೆ ನೀಡಿದರು.

ಆರೋಗ್ಯ ನಿರೀಕ್ಷಕ ಪ್ರಕಾಶ್‌ಬಾಬು ಮಾತನಾಡಿ, ದೀಪಾವಳಿ ಹಬ್ಬದ ಪಟಾಕಿ ಬಳಕೆ ಸಮಯದಲ್ಲಿ ಕಣ್ಣು ಕಳೆದುಕೊಳ್ಳುವ ಪ್ರಕರಣಗಳು ಜರುಗಿದ್ದು, ಮಕ್ಕಳು ಪಟಾಕಿ ಬಳಸುವಾಗ ಪಾಲಕರು ಜಾಗೃತಿ ತೋರಬೇಕು. ಪಟ್ಟಣ ಸ್ವಚ್ಚತೆಗಾಗಿ ಪುರಸಭೆಯೊಂದಿಗೆ ಕೈಜೋಡಿಸುವಲ್ಲಿ ನಾಗರೀಕರು ಮುಂದಾಗಬೇಕು ಎಂದರು.

ಕಚೇರಿ ಆವರಣದಲ್ಲಿ ಸೆಲ್ಫಿ ಬೋರ್ಡ್, ಸಿಗ್ನೇಚರ್ ಕ್ಯಾಂಪೇನ್ ಅಳವಡಿಸಲಾಗಿತ್ತು. ಸ್ವಸಹಾಯಸಂಘಗಳ ಸದಸ್ಯೆಯರು ಸೆಲ್ಫಿ ಬೋರ್ಡ್‌ನಲ್ಲಿ ಪೋಟೋ ತೆಗೆಸಿಕೊಂಡು ಸಂಭ್ರಮಿಸಿದರು. ಪರಿಸರಸ್ನೇಹಿ ದೀಪಾವಳಿ ಆಚರಣೆ ಕುರಿತು ಪ್ರತಿಜ್ಞಾವಿಧಿ ಬೋಧಿಸಲಾಯಿತು. ಆರೋಗ್ಯ ನಿರೀಕ್ಷಕ ಜೀವನ್‌ಸ್ವಾತಿ, ಸಮುದಾಯ ಸಂಘಟನಾಧಿಕಾರಿ ಎಂ.ವಸಂತಮ್ಮ, ಜೆಇ ಮೇಘನಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net