ಪರಿಸರ ನಾಶದಿಂದ ಮಳೆ ಪ್ರಮಾಣ ಕುಸಿತ

Untitled design(2)
ಸಿಂಧನೂರು ತಾಲೂಕಿನ ಕುರುಕುಂದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನ್ಯಾಷನಲ್ ಪದವಿ ಮಹಾವಿದ್ಯಾಲಯ ಎನ್ನೆಸ್ಸೆಸ್ ಘಟಕದಿಂದ ವನಮಹೋತ್ಸವ ಆಚರಿಸಲಾಯಿತು. ಯುವ ಉದ್ಯಮಿ ತಿಮಣ್ಣ ಸಾಹುಕಾರ, ಎಸ್ಡಿಎಂಸಿ ಅಧ್ಯಕ್ಷ ಗುಡದಪ್ಪ ನಾಯಕ, ಪ್ರಭಾರಿ ಮುಖ್ಯಶಿಕ್ಷಕ ಸಿದ್ದಪ್ಪ, ಗ್ರಾಪಂ ಸದಸ್ಯರಾದ ಗುಡದಪ್ಪ, ಶಿವಬಸಪ್ಪ ಕಾಸರಡ್ಡಿ, ಶಂಕ್ರಪ್ಪ, ಪಂಪಣ್ಣ ಹಲಗಿ, ಅಂಬಣ್ಣ ನಾಯಕ ಇದ್ದರು.
Published on

ಸಿಂಧನೂರು: ಮನೆಗೊಂದು ಮರ ಬೆಳೆಸುವ ಪ್ರವೃತ್ತಿ ಬೆಳೆಸಿಕೊಳ್ಳುವ ಮೂಲಕ ಪರಿಸರ ಕಾಳಜಿ ತೋರಬೇಕು ಎಂದು ರಾಷ್ಟ್ರೀಯ ಸೇವಾ ಯೋಜನಾ ಘಟಕ ಅಧಿಕಾರಿ ರವಿಕುಮಾರ ಮಸ್ಕಿ ಹೇಳಿದರು.

ತಾಲೂಕಿನ ಕುರುಕುಂದ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನ್ಯಾಷನಲ್ ಪದವಿ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ವನಸಿರಿ ಫೌಂಡೇಷನ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು. ಪರಿಸರ ಕಾಳಜಿ ಕಡಿಮೆಯಾದಷ್ಟು ಮಳೆಯ ಪ್ರಮಾಣ ಕುಸಿಯಲಿದೆ. ಈ ಬಗ್ಗೆ ಎಲ್ಲರಿಗೂ ಪ್ರಜ್ಞೆ ಇದ್ದರೂ, ಗಿಡ-ಮರ ಬೆಳೆಸುವ ಪ್ರವೃತ್ತಿಗೆ ಮುಂದಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ದೃಢ ಸಂಕಲ್ಪದಿಂದ ಸಾಧನೆ ಸಾಧ್ಯ

ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತ ಅಮರೇಗೌಡ ಮಲ್ಲಾಪುರ ಮಾತನಾಡಿ, ಪರಿಸರ ಬೆಳೆಸುವ ಹುಚ್ಚು, ಇವತ್ತಿನ ಹಸಿರೀಕರಣಕ್ಕೆ ನಾಂದಿಯಾಗಿದೆ. ಸಾವಿರಾರು ಗಿಡ ನೆಡಲಾಗಿದೆ. ಇಂದು ಹೆಮ್ಮರವಾಗಿ ಬೆಳೆದು ನೆರಳಿನ ಜತೆಗೆ ಉತ್ತಮ ವಾತಾವರಣ ನೀಡುತ್ತಿವೆ. ಕಾಟಾಚಾರದ ಕಾರ್ಯದಿಂದ ಯಾವುದನ್ನು ಸಾಧಿಸಲು ಸಾಧ್ಯವಿಲ್ಲ. ದೃಢ ಸಂಕಲ್ಪದಿಂದ ಸಾಧ್ಯ ಎಂದು ತಿಳಿಸಿದರು.

ಇದನ್ನೂ ಓದಿ:

ಯುವ ಉದ್ಯಮಿ ತಿಮಣ್ಣ ಸಾಹುಕಾರ, ಎಸ್ಡಿಎಂಸಿ ಅಧ್ಯಕ್ಷ ಗುಡದಪ್ಪ ನಾಯಕ, ಪ್ರಭಾರಿ ಮುಖ್ಯಶಿಕ್ಷಕ ಸಿದ್ದಪ್ಪ, ಗ್ರಾಪಂ ಸದಸ್ಯರಾದ ಗುಡದಪ್ಪ, ಶಿವಬಸಪ್ಪ ಕಾಸರಡ್ಡಿ, ಶಂಕ್ರಪ್ಪ, ಪಂಪಣ್ಣ ಹಲಗಿ, ಅಂಬಣ್ಣ ನಾಯಕ, ಶಿಕ್ಷಕರಾದ ನಾಗರಾಜ, ವಸುಂದರಾ, ನಳಿನಿ, ಮಹಾಲಕ್ಷ್ಮೀ, ಈರಪ್ಪ ಶಿಕ್ಷಕ ಯಮನೂರು ಇದ್ದರು. ಬಳಿಕ ಸರ್ಕಾರಿ ಶಾಲೆ, ದೇವಸ್ಥಾನ, ಚರ್ಚ್, ಸಮುದಾಯ ಭವನ ಸೇರಿ ವಿವಿಧೆಡೆ ಎನ್ನೆಸ್ಸೆಸ್ ಶಿಬಿರಾರ್ಥಿಗಳು ಸಸಿಗಳನ್ನು ನೆಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net