ಪರಿಸರದಿಂದ ಮಾನಸಿಕ ಶಾಂತಿ - ಕೃಷಿ ಅಧಿಕಾರಿ ಪ್ರತಾಪಗೌಡ ನಂದನಗೌಡ ಅಭಿಮತ

Alavandi Vanamohotsava
ಅಳವಂಡಿ ರೈತ ಸಂಪರ್ಕ ಕೇಂದ್ರದಲ್ಲಿ ಆಯೋಜಿಸಿದ್ದ ವನ ಮಹೋತ್ಸವ ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಪ್ರತಾಪಗೌಡ, ವೀರೇಶ, ಅರಣ್ಯ ಇಲಾಖೆಯ ರವಿ ಜೋಗಿನ, ಪ್ರಮುಖರಾದ ಶಂಕರಪ್ಪ. ಪರಮೇಶ, ವಿಶ್ವ ಇತರರು ಇದ್ದರು.
Published on

ಅಳವಂಡಿ: ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಸಾರ್ವಜನಿಕರು, ಸಂಘಟನೆಗಳು ಸರ್ಕಾರದ ಜೊತೆ ಕೈಜೋಡಿಸಬೇಕು. ಪರಿಸರ ಜಾಗೃತಿ ಮೂಡಿಸುವ ಕಾರ್ಯಕ್ರಮ ಆಯೋಜಿಸಬೇಕು ಎಂದು ಕೃಷಿ ಅಧಿಕಾರಿ ಪ್ರತಾಪಗೌಡ ನಂದನಗೌಡ ತಿಳಿಸಿದರು.

ಗ್ರಾಮದ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಇಲಾಖೆ, ಅರಣ್ಯ ಇಲಾಖೆ ಆಶ್ರಯದಲ್ಲಿ ಆಯೋಜಿಸಿದ್ದ ವನ ಮಹೋತ್ಸವ ಕಾರ್ಯಕ್ರಮದಲ್ಲಿ ಗಿಡ ನೆಟ್ಟು ಶುಕ್ರವಾರ ಮಾತನಾಡಿದರು. ಪರಿಸರ ನಮಗೆಲ್ಲ ಜೀವ ಕೊಟ್ಟಿದೆ. ಇದನ್ನು ಉಳಿಸಿಕೊಳ್ಳಬೇಕು. ಗಿಡ-ಮರಗಳನ್ನು ಸಂರಕ್ಷಿಸಬೇಕು. ಪರಿಸರದಿಂದ ದೈಹಿಕ, ಮಾನಸಿಕ ಶಾಂತಿ ಸಾಧ್ಯ ಎಂದರು.

ಸಹಾಯಕ ಕೃಷಿ ಅಧಿಕಾರಿ ವೀರೇಶ ಪಟ್ಟೇದ ಮಾತನಾಡಿ, ನಾವುಗಳು ಪರಿಸರದಿಂದ ಪಡೆದ ಪ್ರಯೋಜನಗಳಿಂದ ಬದುಕುತ್ತಿದ್ದೇವೆ. ಸಾಧ್ಯವಿದ್ದಷ್ಟೂ ಪರಿಸರ ಕಾಪಾಡುವ ಬಗ್ಗೆ ಕಾಳಜಿ ಇರಲಿ ಎಂದರು. ಪ್ರಮುಖರಾದ ಶಂಕರಪ್ಪ ಮೇಟಿ, ವಿಶ್ವನಾಥ, ರವಿ ಜೋಗಿನ, ವೆಂಕಟೇಶ, ನಿಂಗಪ್ಪ ಮೇಟಿ, ಪರಮೇಶ ಆರೇರ, ಬಸವರಾಜ ಕವಲೂರು, ಮುರ್ತುಜಾಸಾಬ, ಕೊಟ್ರೇಶ ಮೇಟಿ, ಗ್ಯಾನಪ್ಪ ಮಡಿವಾಳರ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net