ಆಲಮಟ್ಟಿಯಲ್ಲಿ ಜಿಂಕೆ ವನ ನಿರ್ಮಿಸಲು ಪರಿಸರ ಪ್ರೇಮಿಗಳಿಂದ ಒತ್ತಾಯ

JINKE VANA
ಬೆಂಗಳೂರಿನಲ್ಲಿ ಸಚಿವ ಶಿವಾನಂದ ಪಾಟೀಲರಿಗೆ ನಿಡಗುಂದಿ ಭಾಗದ ಪರಿಸರ ಪ್ರೇಮಿಗಳು ಜಿಂಕೆ ವನ ನಿರ್ಮಾಣಕ್ಕೆ ಆಗ್ರಹಿಸಿ ಮನವಿ ಸಲ್ಲಿಸಿದರು. ಸಂಗಮೇಶ ಬಳಗಾರ, ಆರ್.ಎಸ್. ಪ್ಯಾಟಿಗೌಡರ, ಶ್ರೀಕಾಂತ ಎಸ್. ಗಂಜಿಹಾಳ ಮತ್ತಿತರರಿದ್ದಾರೆ.
Published on

ವಿಜಯಪುರ: ನಿಡಗುಂದಿ ತಾಲೂಕಿನ ಆಲಮಟ್ಟಿಯ ಕೆಬಿಜೆಎನ್‌ಎಲ್ ನಿಗಮದ ವ್ಯಾಪ್ತಿಯಲ್ಲಿ ಜಿಂಕೆ ವನ ನಿರ್ಮಿಸಲು ಆಗ್ರಹಿಸಿ ಪರಿಸರ ಪ್ರೇಮಿಗಳು ಜವಳಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲಗೆ ಮನವಿ ಸಲ್ಲಿಸಿದರು.
ಈಚೆಗೆ ಬೆಂಗಳೂರಿನಲ್ಲಿ ಸಚಿವರನ್ನು ಭೇಟಿ ಮಾಡಿದ ಪರಿಸರ ಪ್ರೇಮಿಗಳು, ಆಲಮಟ್ಟಿ ಸುತ್ತ ಮುತ್ತ ಹಸಿರಿನಿಂದ ಕೂಡಿರುವ ವಿವಿಧ ಉದ್ಯಾನವನಗಳು ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಕೃಷ್ಣೆಯ ದಡದಲ್ಲಿ ಹಸಿರಿನಿಂದ ಕೂಡಿರುವ ಅರಣ್ಯ ಪ್ರದೇಶದಲ್ಲಿ ಹಕ್ಕಿ ಪಕ್ಷಿಗಳ ಚಿಲಿ-ಪಿಲಿ ಶಬ್ದ, ನವಿಲಿನ ನರ್ತನ ಕಣ್ಮನ ಸೆಳೆಯುತ್ತಿವೆ. ಅದೇ ರೀತಿ ಜಿಂಕೆಗಳು ಕೂಡ ಕಾಣಿಸಿಕೊಳ್ಳುತ್ತಿದ್ದು, ಈ ಭಾಗದಲ್ಲಿ ಜಿಂಕೆ ವನ ನಿರ್ಮಿಸುವುದರಿಂದ ರಾಜ್ಯ ಹಾಗೂ ದೇಶದ ಪ್ರವಾಸಿಗರನ್ನು ಸೆಳೆಯಲು ಸಹಕಾರಿಯಾಗಲಿದೆ ಎಂದು ಮನವರಿಕೆ ಮಾಡಿದರು.
ನಿಡಗುಂದಿ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಸಂಗಮೇಶ ಬಳಗಾರ, ನಿವೃತ್ತ ಅರಣ್ಯ ಅಧಿಕಾರಿ ಆರ್.ಎಸ್. ಪ್ಯಾಟಿಗೌಡರ, ಶ್ರೀಕಾಂತ ಎಸ್. ಗಂಜಿಹಾಳ, ಚಂದ್ರಕಾಂತ ರೂಡಗಿ, ಗಂಗಾಧರ ವಾರದ, ಬಸಪ್ಪ ಕಾಜಗಾರ, ತಮ್ಮಣ್ಣ ಬಂಡಿವಡ್ಡರ, ಪರಶುರಾಮ ಕಾರಿ, ಶಂಕರಗೌಡ ಬಿರಾದಾರ, ತುಳಜಾರಾಮ ಹಜೇರಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net