

ರಬಕವಿ/ಬನಹಟ್ಟಿ: ರಬಕವಿ ಪಟ್ಟಣದ ಪರಿಸರ ಪ್ರೇಮಿಗಳು ಸಾಮೂಹಿಕವಾಗಿ ರಬಕವಿ-ಮಹಾಲಿಂಗಪುರ ರಸ್ತೆಯಲ್ಲಿನ ಹಜಾರೆ ಟೆಕ್ಸ್‌ಟೈಲ್ಸ್ ಬಳಿಯ ಅಂದಾಜು 2 ಕಿಮೀವರೆಗೂ ರಸ್ತೆ ವಿಭಜಕದ ಮಧ್ಯೆಭಾಗದಲ್ಲಿ ಗಿಡಗಳನ್ನು ನೆಟ್ಟು ಪರಿಸರ ಜಾಗೃತಿ ಮೂಡಿಸಲಾಯಿತು.
ಹಜಾರೆ ಟೆಕ್ಸ್‌ಟೈಲ್ ಮಾಲೀಕ ಪ್ರಸನ್ನ ಹಜಾರೆ ಮಾತನಾಡಿ, ವಾಯು ವಿಹಾರಿಗಳೆಲ್ಲ ಸೇರಿ ಈ ರೀತಿಯ ಪರಸರ ಪ್ರೇಮ ಬೆಳೆಸಿಕೊಳ್ಳುವುದರಿಂದ ನಾಡಿಗೆ ಮತ್ತು ಪರಿಸರ ರಕ್ಷಿಸಿದಂತಾಗುತ್ತದೆ. ಮುಂದಿನ ಪೀಳಿಗೆಗೆ ಇದೊಂದು ಮಾದರಿಯಾಗುತ್ತದೆ. ಗಿಡಮರಗಳನ್ನು ಬೆಳೆಸುವುರರಿಂದ ಶುದ್ಧ ಗಾಳಿ ದೊರಕಿ ಮನುಷ್ಯ ಆರೋಗ್ಯಮಯ ಜೀವನ ಸಾಗಿಸಬಲ್ಲ. ಜತೆಗೆ ಈ ಎರಡು ಕಿಮೀ ದೂರದವರೆಗೆ ನೆಟ್ಟ ಗಿಡಗಳನ್ನು ಉಳಿಸಿ ಬೆಳೆಸುವುದು ಹಜಾರೆ ಟೆಕ್ಸ್‌ಟೈಲ್ ಜವಾಬ್ದಾರಿ ತೆಗೆದುಕೊಳ್ಳಲಿದೆ ಎಂದು ತಿಳಿಸಿದರು. ಈ ರೀತಿ ವಿವಿಧ ಗಿಡಗಳನ್ನು ನೆಡುವ ಮೂಲಕ ರಸ್ತೆ ಮಧ್ಯೆ ಈ ಗಿಡಗಳು ಸೊಂಪಾಗಿ ಬೆಳೆದಲ್ಲಿ ರಸ್ತೆ ಸೌಂದರ್ಯ ವೃದ್ಧಿಯಾಗುತ್ತದೆ ಎಂದು ಹೇಳಿದರು.
ಪ್ರವೀಣ ಹಜಾರೆ, ಸಂಜಯ ತೇಲಿ, ಸಿದ್ದಪ್ಪ ಮೇಣಿ, ಅಣ್ಣಪ್ಪ ಮೂಲಿಮನಿ, ಈರಣ್ಣ ಗುಣಕಿ, ವಿಜಯ ನಾಶಿ, ಸೋಮು ಉಮದಿ, ಈರಣ್ಣ ಗಣಮುಖಿ, ಸಂಜು ಮುಳವಾಡ, ಮಹಾದೇವ ಮೇಣಿ, ಮಹಾದೇವ ಕೋಟ್ಯಾಳ, ಬಸವರಾಜ ಮುಗಳ್ಯಾಳ, ಶಂಕರ ದಡ್ಡ, ಬಸವರಾಜ ಸಾಬೋಜಿ, ಶಿವಾನಂದ ಕೋಲಿ, ಮಂಜು ತೇಲಿ, ವಿಶ್ವನಾಥ ಮಿರ್ಜಿ, ಶ್ರೀಶೈಲ ಭೂಯ್ಯರ, ಡಾ. ಸಂಗಮೇಶ ಹತಪಕಿ, ಡಾ. ಜಿ.ಎಚ್. ಚಿತ್ತರಗಿ ಇತರರಿದ್ದರು.