ಪರಿಸರ ಸ್ನೇಹಿ ಬಟ್ಟೆಚೀಲ ಬಳಸಲಿ

16Kagavad3
Published on

ಕಾಗವಾಡ: ಮಿರಜ್ ಪಟ್ಟಣದ ಇನ್ನರ್‌ವ್ಹೀಲ್ ಕ್ಲಬ್ ವತಿಯಿಂದ ಈಚೆಗೆ ಪ್ಲಾಸ್ಟಿಕ್ ಮುಕ್ತ ಸಮಾಜ ಮತ್ತು ಬಟ್ಟೆ ಚೀಲಗಳ ಉಪಯೋಗ, ಪರಿಸರ ರಕ್ಷಣೆ ಕುರಿತು ವಿಶೇಷ ಅಭಿಯಾನ ಜರುಗಿತು.

ಇನ್ನರ್‌ವ್ಹೀಲ್ ಕ್ಲಬ್‌ನ ಮಿರಜ್ ಶಾಖೆ ಅಧ್ಯಕ್ಷ ಡಾ.ಪೂಜಾ ಭೋಮಾಜ ಮತ್ತು ಕಾರ್ಯದರ್ಶಿ ಮಧುರಾ ಜೋಶಿ ಮಾತನಾಡಿ, ದಿನನಿತ್ಯದ ಬದುಕಿನಲ್ಲಿ ಪ್ಲಾಸ್ಟಿಕ್ ಬಳಕೆ ಹೆಚ್ಚುತ್ತಿದ್ದು, ಇದರಿಂದ ಪರಿಸರಕ್ಕೆ ಹಾನಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ, ಪರಿಸರ ಸ್ನೇಹಿ ಚೀಲ ಉಪಯೋಗಿಸಬೇಕು. ನಮ್ಮ ಕ್ಲಬ್ ಮೂಲಕ ಮಹಿಳೆಯರಿಗೆ ಬಟ್ಟೆ ಚೀಲ ತಯಾರಿಸಲು ಮತ್ತು ಉಪಯೋಗಿಸಲು ಉತ್ತೇಜನ ನೀಡುವ ಜತೆಗೆ ಬಟ್ಟೆ ಚೀಲ ತಯಾರಿಸುವ ಯಂತ್ರ ಕೊಡಲಾಗುತ್ತಿದೆ. ಮಹಿಳೆಯರು ಇದರ ಲಾಭ ಪಡೆದುಕೊಳ್ಳಬೇಕೆಂದರು.

ಪಟ್ಟಣದ ಲಕ್ಷ್ಮೀ ಮಾರ್ಕೆಟ್‌ನಲ್ಲಿರುವ ಮಹಿಳಾ ಉದ್ಯೋಗ ಇಲಾಖೆಯಿಂದ ಬಟ್ಟೆ ಚೀಲ ತಯಾರಿಸುವ ಯಂತ್ರ ಹಸ್ತಾಂತರಿಸಲಾಯಿತು. ರಜಿಯಾ ನಾಯಕವಾಡಿ, ಗಜೇಂದ್ರ ಕಲ್ಲೋಳಿ, ಕೇತಕಿ ಮಹಾಜನ, ಡಾ.ನಿಶಾ ಕರಂಜೆ, ಡಾ.ಗೀತಾ ಕದಂ, ಅನಘಾ ರಾಜೋಪಾಧ್ಯಾಯ, ಹಿಮಾಂಶು ಲೇಲೆ, ಅಮೋಲ್ ಠೊಂಬರೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net