

ತರೀಕೆರೆ: ಮುಂದಿನ ಪೀಳಿಗೆ ಸಲುವಾಗಿ ಪರಿಸರ ರಕ್ಷಿಸಬೇಕಿದೆ ಎಂದು ತಹಸೀಲ್ದಾರ್ ವಿನಾಯಕ್ ಸಾಗರ್ ಹೇಳಿದರು. ಅಜ್ಜಂಪುರದ ಮೋಕ್ಷಧಾಮದಲ್ಲಿ ಅರಣ್ಯ ಇಲಾಖೆ, ಪುರಸಭೆ, ತಾಲೂಕು ಆಡಳಿತ ಹಾಗೂ ಸ್ವಚ್ಛತಾ ಬಳಗದ ಆಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಸಸಿ ನೆಟ್ಟು ಮಾತನಾಡಿ, ಪರಿಸರ ಉತ್ತಮಗೊಳಿಸಿದರೆ, ಸುತ್ತಮುತ್ತಲ ವಾತಾವರಣ ಹಿತವಾಗಿರುವ ಜತೆಗೆ ಸಮೃದ್ಧವಾದ ಮಳೆ ಸುರಿದು ಇಳೆ ಸಂಪಾಗಲಿದೆ ಎಂದರು.
ತಾಪಂ ಇಒ ಎಂ.ಕೆ.ವಿಜಯಕುಮಾರ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಟಿ.ಜಿ.ರಮೇಶ್, ಆರ್‌ಎಫ್‌ಒ ವಾಸುದೇವ್, ಜಿಪಂ ಮಾಜಿ ಸದಸ್ಯ ಎ.ಸಿ.ಚಂದ್ರಪ್ಪ, ಕನ್ನಡ ಜಾನಪದ ಪರಿಷತ್ ಮಾಜಿ ತಾಲೂಕು ಅಧ್ಯಕ್ಷೆ ಕೆ.ಸಿ.ವಿಜಯಕುಮಾರಿ, ಮೋಕ್ಷಧಾಮದ ಅಧ್ಯಕ್ಷ ಎಸ್.ಪ್ರಹ್ಲಾದ್ ಮತ್ತಿತರರಿದ್ದರು.