

ಕೋಟ: ಪರಿಸರ ದಿನಾಚರಣೆ ವರ್ಷದ ಒಂದು ದಿನಕ್ಕೆ ಸೀಮಿತವಾಗದೆ ನಿತ್ಯವೂ ಆಗಬೇಕು. ಹೆಚ್ಚುಹೆಚ್ಚು ಗಿಡಗಳನ್ನು ನೆಟ್ಟು ಪೋಷಿಸಬೇಕು ಎಂದು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ.ಕುಂದರ್ ಹೇಳಿದರು.
ವನಮಹೋತ್ಸವ ಪ್ರಯುಕ್ತ ಗೀತಾನಂದ ಫೌಂಡೇಶನ್ ವತಿಯಿಂದ ಹೆಸಕುತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಎಸ್ಡಿಎಂಸಿ ಅಧ್ಯಕ್ಷ ಕೃಷ್ಣ ಕೆದ್ಲಾಯ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಚಂದ್ರಶೇಖರ ಶೆಟ್ಟಿ ಕೆ.ಎನ್., ಪಲ್ಲವಿ ಕುಲಾಲ್, ರಾಘವೇಂದ್ರ ಶೆಟ್ಟಿ, ಆಶಾ ಕುಲಾಲ್, ಸುಧಾಕರ ಕುಲಾಲ್, ಸಂಜೀವ ಎಂ., ವಿಜಯಾ ಆರ್, ರವೀಂದ್ರ ನಾಯಕ್, ಸ್ವಾತಿ ಬಿ., ಮಧುರಾ, ಎಸ್ಡಿಎಂಸಿ ಸದಸ್ಯರು, ಪಾಲಕರು ಉಪಸ್ಥಿತರಿದ್ದರು. ಶೇಖರ ಕುಮಾರ್ ಸ್ವಾಗತಿಸಿದರು. ವಿಜಯ ಶೆಟ್ಟಿ ವಂದಿಸಿದರು. ಅಶೋಕ ತೆಕ್ಕಟ್ಟೆ ಕಾರ್ಯಕ್ರಮ ನಿರೂಪಿಸಿದರು.