

ಹುಬ್ಬಳ್ಳಿ: ಪ್ರತಿಯೊಬ್ಬ ದೇಶಭಕ್ತ ನಾಗರಿಕರು ಆರೋಗ್ಯಕರ ಸಮಾಜ ನಿರ್ಮಾಣಕ್ಕಾಗಿ ಮನೆ, ಶಾಲೆ, ಹೊಲ ಗದ್ದೆ ಸೇರಿದಂತೆ ಬಯಲು ಪ್ರದೇಶಗಳಲ್ಲಿ ಸಸಿಗಳನ್ನು ನೆಟ್ಟು ಅವುಗಳನ್ನು ಕುಟುಂಬ ಸದಸ್ಯರಂತೆ ಕಾಪಾಡಬೇಕು ಎಂದು ಶ್ರೀ ಬಸವೇಶ್ವರ ರೂರಲ್ ಎಜ್ಯುಕೇಶನ್ ಆ್ಯಂಡ್ ಡೆವಲಪಮೆಂಟ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಡಾ. ಶರಣಪ್ಪ ಕೊಟಗಿ ಹೇಳಿದರು.
ಧಾರವಾಡ ತಾಲೂಕಿನ ಸತ್ತೂರಿನಲ್ಲಿ ಕರ್ನಾಟಕ ರಾಜ್ಯ ಪರಿಸರ ಸಂರಕ್ಷಣಾ ಜಾಗೃತಿ ವೇದಿಕೆ ಮತ್ತು ಡಾ. ಶರಣಪ್ಪ ಕೊಟಗಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಕುಟುಂಬಕ್ಕೆ ನಾವೆಲ್ಲರೂ ಹೇಗೆ ಮಹತ್ವ ನೀಡುತ್ತೇವೆಯೋ ಅದೇ ರೀತಿ ನಾವು ವಾಸಿಸುತ್ತಿರುವ ಪರಿಸರ ಸಂರಕ್ಷಣೆಗೂ ಮಹತ್ವ ಕೊಡಬೇಕೆಂದರು. ಮುಖಂಡ ವಿ.ಜಿ. ಪಾಟೀಲ್ ಮಾತನಾಡಿದರು.
ಮಹಾವಿದ್ಯಾಲಯದ ಟ್ರಸ್ಟಿ ನಾಗರಾಜ ಕೊಟಗಿ, ಎಂ.ಎಚ್. ಚಳ್ಳಮರದ ಶೇಖ್, ಸಿಕಂದರ್ ಶೇಖ, ಪ್ರಾಂಶುಪಾಲ ಡಾ. ಮಹಾಂತೇಶ ಹಿರೇಮಠ, ಡಾ. ಕಿರಣ ಸಾಣಿಕೊಪ್ಪ, ಡಾ. ಸರೋಜಿನಿ ದೇಸಾಯಿ, ನವೀನ್ ಕರೆರ, ಪ್ರವಿಣ ಪೂಜಾರ, ವಿಜಯ ವಡ್ದೆ, ಉಮೇಶ ಜಾವೂರ ಇತರರು ಉಪಸ್ಥಿತರಿದ್ದರು.