ಆದರ್ಶ ಶಾಲೆಯಲ್ಲಿ ವನಮಹೋತ್ಸವ

IMG-20250605-WA0025.jpg
Published on

ಹುಬ್ಬಳ್ಳಿ: ನಗರದ ಕೇಶ್ವಾಪುರ ಆದರ್ಶ ಪಬ್ಲಿಕ್ ಶಾಲೆಯಲ್ಲಿ ವಿಎಕೆ ಫೌಂಡೇಷನ್ ವತಿಯಿಂದ ವಿಶ್ವ ಪರಿಸರ ದಿನದ ಅಂಗವಾಗಿ 10 ಸಸಿಗಳನ್ನು ನೆಡುವ ಮೂಲಕ ವನಮಹೋತ್ಸವ ಆಚರಿಸಲಾಯಿತು.

ಅತಿಥಿಯಾಗಿದ್ದ ವಿಎಕೆ ಫೌಂಡೇಷನ್ ಉಪಾಧ್ಯಕ್ಷೆ ಕೋಮಲ್ ಕಾಟವೆ ಅವರು ಸಸಿಗಳನ್ನು ನೆಟ್ಟು, ಮಕ್ಕಳಿಗೆ ಪರಿಸರ ರಕ್ಷಣೆ ಕುರಿತು ಮಾರ್ಗದರ್ಶನ ಮಾಡಿದರು.

ಆದರ್ಶ ಶಾಲೆಯ ಸಂಸ್ಥಾಪಕ ಗೋಪಾಲ್ ರಂಗರೇಜ್, ಅಧ್ಯಕ್ಷ ಆದರ್ಶ ರಂಗರೇಜ್, ಉದ್ಯಮಿ ಮೀರಾ ಮೆಹರವಾಡೆ, ಶಾಲೆಯ ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net