

ಮಡಿಕೇರಿ: ಮದೆ ಮಹೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ವಿಶ್ವ ಪರಿಸರ ದಿನಾಚರಣೆಯನ್ನು ಕಾಲೇಜಿನಲ್ಲಿ ಎಲ್ಲಾ ವಿದ್ಯಾರ್ಥಿಗಳು ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಸೇರಿ ಆಚರಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ಸಿದ್ದರಾಜು ಬೆಳ್ಳಯ್ಯ ಮಾತನಾಡಿ, ಇಡೀ ವಿಶ್ವಕ್ಕೆ ಇರುವುದು ಒಂದೇ ಭೂಮಿ. ಆದರೆ, ಭೂಮಿಯ ಮೇಲೆ ವಾಸಿಸುವ ಸುಮಾರು ೭೦೦ ಕೋಟಿ ಜನಸಂಖ್ಯೆಗೆ ಇರುವುದು ಒಂದೇ ಭೂಮಿ ಈ ಭೂಮಿಯನ್ನು ರಕ್ಷಿಸ ಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.
ಮನುಕುಲಕ್ಕೆ ಸಂಸ್ಕಾರ ಪ್ರಾರಂಭವಾಗುವುದು ಮನೆಯಿಂದಲೇ ಈ ಸಂಸ್ಕಾರದಲ್ಲಿ ಪರಿಸರ ಸಂರಕ್ಷಣೆ ಒಂದಾಗಿದ್ದು ನಾವು ಪರಿಸರವನ್ನು ಸಂರಕ್ಷಿಸಿದರೆ ಪರಿಸರವು ನಮ್ಮನ್ನು ಸಂರಕ್ಷಿಸುತ್ತದೆ. ನೆಲ ಜಲ ಮತ್ತು ಭೂಮಿಯು ಮನುಕುಲಕ್ಕೆ ಎಲ್ಲವನ್ನು ಪರಿಶುದ್ಧವಾದದ್ದನ್ನೇ ನೀಡಿದೆ ಎಂದರು.
ಕಾರ್ಯಕ್ರಮದಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರಾದ ವಾಣಿ, ರಾಜ್ಯಶಾಸ್ತ್ರ ಉಪನ್ಯಾಸಕ ಯೋಗಿತ, ಇತಿಹಾಸ ಉಪನ್ಯಾಸಕ ಪರಶುರಾಮಪ್ಪ, ಕನ್ನಡ ಉಪನ್ಯಾಸಕ ಶ್ರೀನಿವಾಸ್ ಮತ್ತು ಧರ್ಮಸ್ಥಳ ಸ್ವಸಹಾಯ ಸಂಘದ ಕ್ಷೇತ್ರ ಸಹಾಯಕ ಸಬೀನಾ ಮತ್ತು ಸಂತೋ?್ ಹಾಜರಿದ್ದರು.