ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆ ನಿಲ್ಲಿಸಿ: ಪರಿಸರ ಪ್ರೇಮಿ ಜಯಶಂಕರ್ ಕಿವಿಮಾತು

Environment day celebration in Gorawale village Mandya
Published on

ಮಂಡ್ಯ: ಮನುಷ್ಯನ ಆರೋಗ್ಯಕ್ಕೆ ಕಂಟಕವಾಗಿರುವ ಏಕ ಬಳಕೆ ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆಯನ್ನು ನಿಲ್ಲಿಸುವುದು ಅನಿವಾರ್ಯವಾಗಿದೆ ಎಂದು ಪರಿಸರ ಪ್ರೇಮಿ, ಚೆನ್ನಮ್ಮ ಎಜುಕೇಷನ್ ಟ್ರಸ್ಟ್ ಸಂಸ್ಥಾಪಕ ಜಯಶಂಕರ್ ಸಲಹೆ ನೀಡಿದರು.

ತಾಲೂಕಿನ ಎಚ್.ಮಲ್ಲಿಗೆರೆ ಗ್ರಾಮದಲ್ಲಿ ಮೈಸೂರು ವಿದ್ಯಾವರ್ಧಕ ತಾಂತ್ರಿಕ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಚೆನ್ನಮ್ಮ ಎಜುಕೇಷನ್ ಟ್ರಸ್ಟ್, ಚೆನ್ನಮ್ಮ ಕಾನ್ವೆಂಟ್ ಹಿರಿಯ ಪ್ರಾಥಮಿಕ ಶಾಲೆ ಎಚ್.ಮಲ್ಲಿಗೆರೆ ಸಹಯೋಗದಲ್ಲಿ ಆಯೋಜಿಸಿದ್ದ ವಾರ್ಷಿಕ ವಿಶೇಷ ಮಕ್ಕಳ ಶಿಬಿರ ಹಾಗೂ ವಿಶ್ವ ಪರಿಸರ ದಿನಾಚರಣೆಯಲ್ಲಿ ಮಾತನಾಡಿದರು.

ಪ್ರತಿಯೊಬ್ಬರೂ ಗಿಡ ನೆಟ್ಟು ಪೋಷಣೆ ಮಾಡಬೇಕು. ಈ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಕೊಡುಗೆಯಾಗಿ ನೀಡಬೇಕು. ಅದರಂತೆ ಪ್ಲಾಸ್ಟಿಕ್‌ಗಳ ಬಳಕೆ ನಿಲ್ಲಿಸಬೇಕು. ಬದಲಿಗೆ ಬಟ್ಟೆ ಬ್ಯಾಗ್‌ಗಳನ್ನು ಬಳಕೆ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಪತ್ರಕರ್ತ ಯೋಗೇಶ್, ಮಹಾವಿದ್ಯಾಲಯದ ಎನ್‌ಎಸ್‌ಎಸ್ ವಿಭಾಗದ ಪ್ರಾಧ್ಯಾಪಕ ಸಂಯೋಜಕ ಡಾ.ಕೆ.ಜೆ.ಹೇಮಂತ್‌ಕುಮಾರ್, ಪ್ರಾಧ್ಯಾಪಕ ಪ್ರೊ.ಡಿ.ಎಸ್.ರಕ್ಷಿತ್‌ಗೌಡ ಇತರರಿದ್ದರು. ಇದೇ ವೇಳೆ ಪತ್ರಕರ್ತ ಯೋಗೇಶ್ ಅವರನ್ನು ಸನ್ಮಾನಿಸಲಾಯಿತು. ಸಾರ್ವಜನಿಕರಿಗೆ ಬಟ್ಟೆ ಬ್ಯಾಗ್‌ಗಳನ್ನು ವಿತರಿಸಲಾಯಿತು. ಮಕ್ಕಳಿಂದ ಗಿಡಗಳನ್ನು ನೆಟ್ಟು ನೀರೆರೆಸಲಾಯಿತು.

ಗೊರವಾಲೆಯಲ್ಲಿ ಆಚರಣೆ: ತಾಲೂಕಿನ ದುದ್ದ ಹೋಬಳಿ ಗೊರವಾಲೆ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಬುಧವಾರ ಪರಿಸರ ದಿನವನ್ನು ಆಚರಿಸಲಾಯಿತು. ಪರಿಸರ ಪ್ರೇಮಿ ಜಯಶಂಕರ್ ಅವರು ಗಿಡ ನೆಟ್ಟರು. ಅಂತೆಯೇ ಏಕ ಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳಿಂದಾಗುತ್ತಿರುವ ದುಷ್ಪರಿಣಾಮದ ಬಗ್ಗೆ ಉಪನ್ಯಾಸ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net