

ಮಂಡ್ಯ: ಪರಿಸರ ಉಳಿದರೆ ಮಾತ್ರ ಮುಂದಿನ ಜನಾಂಗ ಸುರಕ್ಷಿತವಾಗಿರಲು ಸಾಧ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಆನಂದ್ ತಿಳಿಸಿದರು.
ನಗರದ ಮಿಮ್ಸ್ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮಂಡ್ಯ, ಮಾಲಿನ್ಯ ನಿಯಂತ್ರಣ ಮಂಡಳಿ, ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್), ಅರಣ್ಯ ಇಲಾಖೆ, ಪರಿಸರ ರೂರಲ್ ಡೆವಲೆಪ್‌ಮೆಂಟ್ ಸೊಸೈಟಿ, ಮಮತೆಯ ಮಡಿಲು ನಿತ್ಯ ಅನ್ನದಾಸೋಹ ಕೇಂದ್ರದ ವತಿಯಿಂದ ವಿಶ್ವ ಪರಿಸರ ದಿನದ ಅಂಗವಾಗಿ ಸಸ್ಯೋತ್ಸವ ಹಾಗೂ ಬಟ್ಟೆ ಕೈಚೀಲ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಒಳ್ಳೆಯ ಗಾಳಿ, ಬೆಳಕು ಬೇಕೆಂದರೆ ಪರಿಸರ ಸಂರಕ್ಷಣೆ ಆಗಬೇಕು. ಗಿಡ ನೆಟ್ಟು ಫೋಷಣೆ ಮಾಡಬೇಕು. ಪ್ರತಿಯೊಬ್ಬರು ತಮ್ಮ ಮನೆಯ ಖಾಲಿ ಇರುವ ಜಾಗದಲ್ಲಿ ಗಿಡ ಬೆಳೆಸಿದರೆ ತಾನಾಗಿ ಪರಿಸರ ಉಳಿಯುತ್ತದೆ. ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ. ನಾವೆಲ್ಲರೂ ಸಾಮಾಜಿಕ ಜವಾಬ್ದಾರಿಯಿಂದ ಪರಿಸರ ಉಳಿಸೋಣ, ನಮ್ಮ ಮುಂದಿನ ಜನಾಂಗವನ್ನು ರಕ್ಷಿಸೋಣ ಎಂದು ತಿಳಿಸಿದರು.
ಉಪ ಪರಿಸರ ಅಧಿಕಾರಿಗಳಾದ ಅಶ್ವಿನಿ, ಭವ್ಯಾ, ಸೊಸೈಟಿ ಅಧ್ಯಕ್ಷ ಮಂಗಲ ಎಂ.ಯೋಗೀಶ್, ಸಂತೆಕಸಲಗೆರೆ ಬಸವರಾಜ್ ಇತರರಿದ್ದರು.