ಠಾಣೆ ಆವರಣದಲ್ಲಿ ಸಸಿ ನೆಟ್ಟ ಪರಿಸರ ದಿನಾಚರಣೆ

07sunti02
Published on

ಸುಂಟಿಕೊಪ್ಪ: ಇಲ್ಲಿನ ಪೊಲೀಸ್ ಠಾಣೆ ಆವರಣದಲ್ಲಿ ಗಿಡ ನೆಡುವುದರೊಂದಿಗೆ ಪರಿಸರ ದಿನವನ್ನು ಆಚರಿಸಲಾಯಿತು.

ಠಾಣಾಧಿಕಾರಿ ಮೋಹನ್ ರಾಜ್ ಸಸಿಯನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಯ ಬಗ್ಗೆ ಮಾಹಿತಿ ನೀಡಿದರು. ಸುಂಟಿಕೊಪ್ಪ ನಾಡು ಪ್ರೌಢ ಶಾಲೆಯ ವಿದ್ಯಾರ್ಥಿನಿ ಶ್ರೀಶಾ, ನಾವು ಪರಿಸರವನ್ನು ಉಳಿಸಬೇಕೆಂದರೆ ಪ್ಲಾಸಿಕ್ ಬಳಕೆಯನ್ನು ಕಡಿಮೆ ಮಾಡಬೇಕು, ಪರಿಸರದಲ್ಲಿರುವ ಪಕ್ಷಿಗಳಿಗೆ ಮನೆಯ ಮುಂದೆ ನೀರನ್ನು ಇಡಬೇಕು ಎಂದು ಹೇಳಿದರು.

ಅಪರಾಧ ವಿಭಾಗದ ಸಬ್‌ಇನ್‌ಸ್ಪೆಕ್ಟರ್ ಭಾರತಿ, ಎಎಸ್‌ಐ ಸೈಮನ್ ಡಿ ಕುನ್ಹ, ಪೇದೆ ಜಗದೀಶ್ ಪಾಲ್ಗೊಂಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net