

ನರಗುಂದ: ತಾಲೂಕಿನ ಬನಹಟ್ಟಿ ಶಾಲಾ ಆವರಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ವಿಶ್ವ ಪರಿಸರ ದಿನ ಆಚರಿಸಲಾಯಿತು. ಶಾಲಾ ಆವರಣದಲ್ಲಿ ವಿವಿಧ ಜಾತಿಯ ಸಸಿಗಳನ್ನು ನೆಟ್ಟು ನೀರುಣಿಸಲಾಯಿತು. ಇದೇ ಸಂದರ್ಭದಲ್ಲಿ ಪರಿಸರ ಕುರಿತು ಶಾಲಾ ಮಕ್ಕಳಿಗೆ ಪ್ರಬಂಧ ರಚನೆ, ಚಿತ್ರಕಲೆ, ಎಲೆ ಗುರುತಿಸುವಿಕೆ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನ ನೀಡಲಾಯಿತು. ಸಂಪನ್ಮೂಲ ವ್ಯಕ್ತಿಗಳಾದ ಸಿ.ವೈ, ಖಾನಾಪುರ, ಧರ್ಮಸ್ಥಳ ಸಂಸ್ಥೆಯ ಯೋಜನಾಧಿಕಾರಿಗಳಾದ ಮಾಲತಿ, ಶಿಕ್ಷಕಿ ಅನ್ನಪೂರ್ಣಾ ಮಾತನಾಡಿದರು. ವಲಯ ಮೇಲ್ವಿಚಾರಕಿ ಯಾಸ್ಮಿನ್, ಕೃಷಿ ಪ್ರಗತಿ ವಿಭಾಗದ ಅಧಿಕಾರಿ ಅಕ್ಷಯ, ಉಪಸ್ಥಿತರಿದ್ದರು.