

ಬನ್ನಿಕುಪ್ಪೆ: ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆ ಬಿಸಿ ಟ್ರಸ್ಟ್‌ವತಿಯಿಂದ ಬನ್ನಿಕುಪ್ಪೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ವಿಶ್ವ ಪರಿಸರ ದಿನ ಹಮ್ಮಿಕೊಳ್ಳಲಾಗಿತ್ತು. ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆ ಬಿಸಿ ಟ್ರಸ್ಟ್ ಒಕ್ಕೂಟದ ಅಧ್ಯಕ್ಷೆ ಆರತಿ ಕಾರ್ಯಕ್ರಮ ಉದ್ಘಾಟಿಸಿದರು. ವಿದ್ಯಾರ್ಥಿಗಳಿಗೆ ಪರಿಸರದ ಕುರಿತು ಪ್ರಬಂಧ, ಭಾಷಣ, ಚಿತ್ರಕಲೆ ಸ್ಪರ್ಧೆ ಏರ್ಪಡಿಸಲಾಗಿತ್ತು. ಸಂಸ್ಥೆಯ ಮೇಲ್ವಿಚಾರಕಿ ರೇಖಾ, ಕೃಷಿ ಅಧಿಕಾರಿ ಚಿದಾನಂದ ಪೂಜಾರಿ, ಶಿಕ್ಷಕ ಶಿವಕುಮಾರ್, ವಿದ್ಯಾರ್ಥಿಗಳಿದ್ದರು.