

ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ
ಪ್ರಪಂಚದ ಸಮತೋಲನ ರಕ್ಷಣೆಗೆ ಪ್ರಕೃತಿಯೇ ಅತಿ ಮುಖ್ಯ. ನಾವೆಲ್ಲರೂ ಕಾಡುಗಳನ್ನು ಉಳಿಸುವುದರ ಜತೆಗೆ ಪ್ರಕೃತಿ ರಕ್ಷಣೆಗೆ ಕೈಜೋಡಿಸಬೇಕು ಎಂದು ಸುಬ್ರಹ್ಮಣ್ಯ ಮಠಾಧೀಶ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ನಿಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆಯ ಆಡಳಿತದ ಸುಬ್ರಹ್ಮಣ್ಯದ ಸದಾನಂದ ಆಸ್ಪತ್ರೆ ಆವರಣದಲ್ಲಿ ಅರಣ್ಯ ಇಲಾಖೆ, ನರಸಿಂಹ ಸ್ವಾಮಿ ಮಠ, ಲಯನ್ಸ್ ಕ್ಲಬ್, ರೋಟರಿ ಕ್ಲಬ್ ಸುಬ್ರಹ್ಮಣ್ಯ, ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಇವುಗಳ ಆಶಯದಲ್ಲಿ ಶನಿವಾರ ನಡೆದ ಪರಿಸರ ದಿನಾಚರಣೆ ಹಾಗೂ ವನಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ನಿಟ್ಟೆ ಡೀಮ್ಡ್ ಯುನಿವರ್ಸಿಟಿಯ ಉಪಾಧ್ಯಕ್ಷ ಡಾ.ಸತೀಶ್ ಭಂಡಾರಿ, ನಿಟ್ಟೆ ಸಮುದಾಯ ಆಸ್ಪತ್ರೆ ವಿಭಾಗದ ಮುಖ್ಯಸ್ಥ ಡಾ.ರಾಘವೇಂದ್ರ, ಸಮುದಾಯ ಆಸ್ಪತ್ರೆಯ ಡೆಂಟಲ್ ಸರ್ಜನ್ ಡಾ.ಆಂಟ್ರಿ ಡಿಸೋಜ, ಎನ್ನೆಸ್ಸೆಸ್ ಸಂಯೋಜಕ ಶಶಿಕುಮಾರ್ ಶೆಟ್ಟಿ, ಸುನಿಲ್, ಸದಾನಂದ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ವಿಕ್ರಂ, ಡೆಂಟಲ್ ಸರ್ಜನ್ ಡಾ.ಚರಣ್ ಶೆಟ್ಟಿ, ಸುಬ್ರಹ್ಮಣ್ಯ ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಶೇಖರ ನಾಯರ್, ಲಯನ್ಸ್ ಕ್ಲಬ್ ಕಾರ್ಯದರ್ಶಿ ಕೃಷ್ಣಕುಮಾರ್ ಬಾಳುಗೋಡು, ಸೀನಿಯರ್ ಚೇಂಬರ್ ಅಧ್ಯಕ್ಷ ಡಾ.ರವಿ ಕಕ್ಕೆಪದವು, ಉಪವಲಯ ಅರಣ್ಯಾಧಿಕಾರಿ ಮನೋಜ್ ಉಪಸ್ಥಿತರಿದ್ದರು.
ವಿಮಲ ರಂಗಯ್ಯ ಸ್ವಾಗತಿಸಿದರು. ಮೋಹನ ಪಳ್ಳಿಗದ್ದೆ ವಂದಿಸಿದರು. ವಿಶ್ವನಾಥ ನಡುತೋಟ ಕಾರ್ಯಕ್ರಮ ನಿರೂಪಿಸಿದರು.