ಪರಿಸರ ಸಂರಕ್ಷಣೆಗೆ ಗಿಡಮರ ಬೆಳೆಸಿ

21-DVD-1
ದೇವದುರ್ಗ ತಾಲೂಕು ಸುಂಕೇಶ್ವರಹಾಳದಲ್ಲಿ ಡಾ.ಪುನೀತ್ ರಾಜಕುಮಾರ್ ಜನ್ಮದಿನ ನಿಮಿತ್ತ ಆಯೋಜಿಸಿದ್ದ ಸ್ಫೂರ್ತಿದಿನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸಸಿ ವಿತರಿಸಲಾಯಿತು. ವನಸಿರಿ ಫೌಂಡೇಷನ್ ತಾಲೂಕು ಕಾರ್ಯದರ್ಶಿ ಸುನೀಲ್ ಜಾಡಲದಿನ್ನಿ, ಪ್ರಮುಖರಾದ ರಂಗಯ್ಯ ಗುತ್ತೇದಾರ್, ಬಸಣ್ಣ ಗುತ್ತೇದಾರ್, ಗಣೇಶ ತಳವಾರ ಇತರರಿದ್ದರು.
Published on

ದೇವದುರ್ಗ: ಪರಿಸರ ಅಸಮತೋಲನದಿಂದ ಜೀವ ಸಂಕುಲಕ್ಕೆ ದುಷ್ಪರಿಣಾಮ ಬೀರುಲಿದೆ. ಆದ್ದರಿಂದ ಗಿಡಮರ ಬೆಳೆಸುವ ಮೂಲಕ ಪರಿಸರ ಸಂರಕ್ಷಣೆ ಮಾಡಬೇಕು ಎಂದು ವನಸಿರಿ ಫೌಂಡೇಷನ್ ತಾಲೂಕು ಕಾರ್ಯದರ್ಶಿ ಸುನೀಲ್ ಜಾಡಲದಿನ್ನಿ ಹೇಳಿದರು.

ಇದನ್ನೂ ಓದಿ:

ತಾಲೂಕಿನ ಸುಂಕೇಶ್ವರಹಾಳದಲ್ಲಿ ಡಾ.ಪುನೀತ್ ರಾಜಕುಮಾರ್ 50ನೇ ಜನ್ಮದಿನ ನಿಮಿತ್ತ ಆಯೋಜಿಸಿದ್ದ ಸ್ಫೂರ್ತಿ ದಿನ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು. ಪುನೀತ್ ರಾಜಕುಮಾರ್ ಸವಿನೆನಪಿಗಾಗಿ ಪ್ರತಿವರ್ಷ ಸ್ಫೂರ್ತಿ ದಿನಾಚರಣೆ ಮಾಡಲಾಗುವುದು. ಅವರ ಕೊನೆಯ ಸಿನಿಮಾ ಗಂಧದಗುಡಿಯಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ಸಂದೇಶ ನೀಡಿದ್ದಾರೆ. ಪರಿಸರ ದಿನಾಚರಣೆ ಎನ್ನುವುದು ಒಂದು ದಿನದ ಆಚರಣೆಗೆ ಸೀಮಿತವಾಗದೆ ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು ಎಂದರು.

ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸಸಿಗಳನ್ನು ವಿತರಿಸಿ ಜಾಗೃತಿ ಮೂಡಿಸಲಾಯಿತು. ಪ್ರಮುಖರಾದ ರಂಗಯ್ಯ ಗುತ್ತೇದಾರ್, ಬಸಣ್ಣ ಗುತ್ತೇದಾರ್, ಗಣೇಶ ತಳವಾರ, ಅಂಬಣ್ಣ ನಾಯಕ, ಆಂಜನೇಯ ಗುತ್ತೇದಾರ್, ರಾಘವೇಂದ್ರ ದೇಸಾಯಿ, ಮಹ್ಮದ್ ಅಲಿ, ಆದಿತ್ಯ ತಳವಾರ, ಬಸಲಿಂಗ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net