ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ: ನ್ಯಾಯಾಧೀಶೆ ಎಂ.ಭಾರತಿ

OCT2-HRP-2
ಹರಪನಹಳ್ಳಿ ನ್ಯಾಯಾಲಯ ಆವರಣದಲ್ಲಿ ಸ್ವಚ್ಛತಾ ಇ ಸೇವಾ ಆಂದೋಲನ ಕುರಿತು ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ. ಭಾರತಿ ಮಾತನಾಡಿದರು. ಸಿವಿಲ್ ನ್ಯಾಯಾಧೀಶೆ ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿ ಫಕ್ಕೀರವ್ವ ಕೆಳಗೇರಿ, ವಕೀಲರ ಸಂಘದ ಅಧ್ಯಕ್ಷ ಎಂ. ಅಜ್ಜಣ್ಣ, ಉಪಾಧ್ಯಕ್ಷ ಕೆ.ವಿರುಪಾಕ್ಷಪ್ಪ, ಕಾರ್ಯದರ್ಶಿ ಕೆ. ಆನಂದ, ಇದ್ದರು.
Published on

ಹರಪನಹಳ್ಳಿ: ಸುತ್ತಲಿನ ವಾತವಾರಣವನ್ನು ಸ್ವಚ್ಚವಾಗಿಸಿಕೊಳ್ಳುವ ಮೂಲಕ ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರೀಕರ ಹೊಣೆಯಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರಾದ ಎಂ. ಭಾರತಿ ಹೇಳಿದರು.

ಪಟ್ಟಣದ ನ್ಯಾಯಾಲಯ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಪುರಸಭೆ ಕಾರ್ಯಲಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಸ್ವಚ್ಚತಾ ಇ ಸೇವಾ ಆಂದೋಲನ 2023 ಕುರಿತು ಕಾನೂನು ಅರಿವು ಕ್ರಾರ್ಯಕ್ರಮದಲ್ಲಿ ಮಾತನಾಡಿದರು.

ಸ್ವಚ್ಛ ಭಾರತ ಅಭಿಯಾನವು ಭಾರತ ಸರಕಾರದ ರಾಷ್ಟ್ರೀಯ ಸ್ವಚ್ಛತಾ ಆಂದೋಲವಾಗಿದೆ. ಪರಿಸರ ಸ್ವಚ್ಛತೆ ಬಗ್ಗೆ ಪ್ರತಿಯೊಬ್ಬ ನಾಗರೀಕರಲ್ಲೂ ಜಾಗೃತಿ ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ.

ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳೂವುದು ಕೇವಲ ಪೌರ ಕಾರ್ಮಿಕರ ಕೆಲಸವಲ್ಲ ನಮ್ಮ ಜವಾಬ್ದಾರಿಯು ಇದೆ ಎಂದು ತಿಳಿಸಿದರು. ಅಪರ ಸರ್ಕಾರಿ ವಕೀಲ ವಿ.ಜಿ.ಪ್ರಕಾಶಗೌಡ, ಸರ್ಕಾರಿ ಅಭಿಯೋಜಕರಾದ ಮೀನಾಕ್ಷೀ, ಎನ್. ನಿರ್ಮಲ.ಡಿ, ಹಿರಿಯ ಆರೋಗ್ಯ ನೀರಿಕ್ಷಕ ಮಂಜುನಾಥ್. ಬಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net