ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ

2SRP1
ಶಿರಗುಪ್ಪಿಯ ಅರಿಹಂತ ಶಿಕ್ಷಣ ಸಮಿತಿ ಶಾಲಾ ಆವರಣದಲ್ಲಿ ಗಾಂಧೀಜಿ, ಲಾಲ್ ಬಹಾದೂರ್ ಶಾಸ್ತ್ರಿ ಅವರ ಜಯಂತಿ ನಿಮಿತ್ತ ಸಸಿ ನೆಡಲಾಯಿತು. ದೀಪಕ ಪಾಟೀಲ, ಬೊಮ್ಮಣ್ಣಾ ಚೌಗುಲೆ, ಅನಿಲ ಚೌಗುಲೆ, ಮಹಾವೀರ ಕಾತ್ರಾಳೆ ಇತರರಿದ್ದರು.
Published on

ಶಿರಗುಪ್ಪಿ: ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಗೆ ಬದ್ಧರಾಗಿ, ಪರಿಸರ ರಕ್ಷಣೆಯ ಅರಿವು ಮೂಡಿಸಬೇಕು ಎಂದು ಚಿಕ್ಕೋಡಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ದೀಪಕ ಪಾಟೀಲ ಹೇಳಿದರು.

ಶಿರಗುಪ್ಪಿಯ ಅರಿಹಂತ ಶಿಕ್ಷಣ ಸಮಿತಿ ಶಾಲಾ ಆವರಣದಲ್ಲಿ ಗಾಂಧೀಜಿ, ಲಾಲ್ ಬಹಾದೂರ್‌ಶಾಸ್ತ್ರಿ ಅವರ ಜಯಂತಿ ನಿಮಿತ್ತ ಆಯೋಜಿಸಿದ್ದ ಸಸಿ ನೆಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪರಿಸರ ಸಂರಕ್ಷಣೆಯಿಂದ ಪ್ರಕೃತಿ ವಿಕೋಪಗಳನ್ನು ತಪ್ಪಿಸಬೇಕು. ಎಲ್ಲರೂ ಒಂದೊಂದು ಸಸಿ ನಡುವ ಮೂಲಕ ವಾತಾವರಣದಲ್ಲಿ ಬದಲಾವಣೆ ತರಬೇಕು ಎಂದು ಸಲಹೆ ನೀಡಿದರು.

ಬಿಜೆಪಿ ಯುವ ಮೋರ್ಚಾದಿಂದ ಸೆಲ್ಫಿ ವಿತ್ ಖಾದಿ ಅಭಿಯಾನ ಪ್ರಾರಂಭಿಸಲಾಗಿದೆ. ಪ್ರತಿಯೊಬ್ಬ ಕಾರ್ಯಕರ್ತ ಇದರಲ್ಲಿ ಭಾಗವಹಿಸಿ, ಸ್ವದೇಶಿ ವಸ್ತುಗಳ ಬಳಕೆಗೆ ಜನರನ್ನು ಪ್ರೋತ್ಸಾಹಿಸಬೇಕು ಎಂದರು. ಬಿಜೆಪಿ ಕಾಗವಾಡ ಮಂಡಲ ಉಪಾಧ್ಯಕ್ಷ ಬೊಮ್ಮಣ್ಣಾ ಚೌಗುಲೆ, ಅರಿಹಂತ ಶಿಕ್ಷಣ ಸಮಿತಿ ಅಧ್ಯಕ್ಷ ಅನಿಲ ಚೌಗುಲೆ, ಉಪಾಧ್ಯಕ್ಷ ಶ್ರಯಾಂಶ ನಾಂದಣಿ, ಮುಖಂಡರಾದ ಮಹಾವೀರ ಕಾತ್ರಾಳೆ, ಅರುಣ ಗಣೇಶವಾಡಿ, ವಿದ್ಯಾಸಾಗರ ಚೌಗುಲೆ, ಸಂತೋಷ ಸೇಠ, ವೃಷಭ ಮೊನೆ, ನಂದು ಪಾಟೀಲ, ಅನಿರುದ್ಧ ತಾರದಾಳೆ, ಗೋಮಟೇಶ ಕಾತ್ರಾಳೆ, ಅಕ್ಷಯ ಪಾಟೀಲ, ರಾಹುಲ ಹೇಮಗಿರೆ, ಸುಭಾಷ ಕಾಗವಾಡೆ, ಅನುಪ ಮಿಣಚೆ, ವಿನಯ ಕುರುಂದವಾಡೆ, ಶುಭಂ ಕಾಟಕರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net