ಪರಿಸರ ಕಾಳಜಿ ಹೊಂದಿದ್ದ ಅಪ್ಪು

18LNG01
ಹುಲಿಗುಡ್ಡದಲ್ಲಿ ಪ್ರಾಣಿ ಪಕ್ಷಿಗಳಿಗೆ ಕುಡಿವ ನೀರಿನ ಅರವಟಿಗೆ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಪ್ರಮುಖರಾದ ರವಿಕುಮಾರ, ಗಣೇಶ ವಕೀಲ, ಪರಶುರಾಮ ಕೆಂಭಾವಿ, ಶಿವಯೋಗಿ, ನಾಗರಾಜ ಮಂಡ್ರೆ, ಚನ್ನಪ್ಪ ಹೊಸಹಳ್ಳಿ ಇತರರಿದ್ದರು.
Published on

ಲಿಂಗಸುಗೂರು: ಡಾ.ಪುನೀತ್ ರಾಜಕುಮಾರ್ ಅವರು ನಟನೆ, ಸಾಮಾಜಿಕ ಕಳಕಳಿ ಜತೆಗೆ ಪರಿಸರ ಕಾಳಜಿ ಹೊಂದಿದ್ದರು ಎಂದು ವನಸಿರಿ ಫೌಂಡೇಷನ್ ಸದಸ್ಯ ಸುರೇಶ ಕುಲಕರ್ಣಿ ಹೇಳಿದರು.

ಹುಲಿಗುಡ್ಡ ಗ್ರಾಮದಲ್ಲಿ ಸೋಮವಾರ ನಟ ಪುನೀತ್ ರಾಜಕುಮಾರ್ ಜನ್ಮದಿನ ಪ್ರಯುಕ್ತ ವನಸಿರಿ ಫೌಂಡೇಷನ್ ಮತ್ತು ಅಪ್ಪು ಅಭಿಮಾನಿ ಬಳಗದಿಂದ ಪ್ರಾಣಿ ಪಕ್ಷಿಗಳಿಗೆ ಕುಡಿವ ನೀರಿನ ಅರವಟಿಗೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ವರನಟ ಡಾ.ರಾಜಕುಮಾರ ಮಾರ್ಗದರ್ಶನದಲ್ಲಿ ನಡೆದು ಶ್ರೇಷ್ಠತೆ ಮೆರೆದ ಪುನೀತ್ ನಿಧನ ಹೊಂದಿದ್ದರೂ ಅಭಿಮಾನಿಗಳ ಹೃದಯದಲ್ಲಿ ನೆಲೆಸಿದ್ದಾರೆ. ಅಪ್ಪು ಅಭಿಮಾನಿಗಳು ಪರಿಸರ ಕಾಳಜಿ ಜತೆಗೆ ಪ್ರಾಣಿ ಪಕ್ಷಿಗಳಿಗೆ ನೀರಿನ ಅರವಟಿಗೆ ಅಳವಡಿಸಲು ಮುಂದಾಗಿರುವುದು ಶ್ಲಾಘನೀಯ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯಕ, ಪ್ರಮುಖರಾದ ರವಿಕುಮಾರ, ಗಣೇಶ ವಕೀಲ, ಪರಶುರಾಮ ಕೆಂಭಾವಿ, ಶಿವಯೋಗಿ, ನಾಗರಾಜ ಮಂಡ್ರೆ, ಚನ್ನಪ್ಪ ಹೊಸಹಳ್ಳಿ, ಹುಸೇನಸಾಬ್, ಶಂಕರ, ರಾಚಪ್ಪ ಆಲ್ವಿ, ಕರಸ್ಥಳಪ್ಪ, ರಾಘವೇಂದ್ರ ಶೆಟ್ಟಿ, ಕುಪ್ಪಣ್ಣ ಭೋವಿ, ಅಶೋಕ, ಶಿವಕಾಂತ, ಶಾಂತಕುಮಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net