

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿಶ್ವ ಪರಿಸರ ದಿನ ನಿಮಿತ್ತ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿ, ಹು&ಧಾ ನಾಗರಿಕ ಪರಿಸರ ಸಮಿತಿ, ಶಾಲಾ ಶಿಣ ಇಲಾಖೆ, ಅರಣ್ಯ ಇಲಾಖೆ ಹಾಗೂ ಎಸ್ಡಿಎಂ ಇಂಜಿನಿಯರಿಂಗ್ ಕಾಲೇಜು ಆಶ್ರಯದಲ್ಲಿ ಜೂ. 5ರಂದು ಬೆಳಗ್ಗೆ 8 ಗಂಟೆಗೆ ಕೋರ್ಟ್ ವೃತ್ತ ಬಳಿಯ ಸ್ಕೌಟ್ಸ್ ಹಾಗೂ ಗೈಡ್ಸ್ ಸಂಸ್ಥೆ ಆವರಣದಲ್ಲಿ ಪರಿಸರ ಜಾಗೃತಿ ಜಾಥಾ ಏರ್ಪಡಿಸಲಾಗಿದೆ.
ಜಿಪಂ ಸಿಇಒ ಸ್ವರೂಪ ಟಿ.ಕೆ ಅವರು ಸಸಿ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸುವರು. ಹಿರಿಯ ಸಿವಿಲ್ ನ್ಯಾಯಾಧೀಶ ಪರಶುರಾಮ ದೊಡ್ಡಮನಿ, ಅರಣ್ಯ ಇಲಾಖೆ ಉಪ ಅರಣ್ಯ ಸಂರಣಾಧಿಕಾರಿ ವಿವೇಕ ಕವರಿ, ಶಾಲಾ ಶಿಣ ಇಲಾಖೆ ಉಪ ನಿರ್ದೇಶಕ ಎಸ್.ಎಸ್. ಕೆಳದಿಮಠ ಅತಿಥಿಗಳಾಗಿ ಆಗಮಿಸುವರು.
ಬೆಳಗ್ಗೆ 11 ಗಂಟೆಗೆ ಭಾಷಣ, ನಿಬಂಧ ಹಾಗೂ ಚಿತ್ರಕಲಾ ಸ್ಪರ್ಧೆ ವಿಜೇತ ಮಕ್ಕಳಿಗೆ ಎಸ್ಡಿಎಂ ಇಂಜಿನಿರಿಂಗ್ ಕಾಲೇಜು ಭವನದಲ್ಲಿ ಬಹುಮಾನ ವಿತರಣೆ ನಡೆಯಲಿದೆ. ಜಿಲ್ಲಾಧಿಕಾರಿ ದಿವ್ಯ ಪ್ರಭು, ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ, ವಲಯ ಕಚೇರಿ ಹಿರಿಯ ಪರಿಸರ ಅಧಿಕಾರಿ ಗೋಪಾಲಕೃಷ್ಣ ಸಣತಂಗಿ, ಕಾಲೇಜಿನ ಪ್ರಾಚಾರ್ಯ ಡಾ.ರಮೇಶ ಚಕ್ರಸಾಲಿ ಅತಿಥಿಗಳಾಗಿ ಆಗಮಿಸುವರು. ಅಧಿಕಾರಿ ಜಗದೀಶ ಐ.ಎಚ್., ಪರಿಸರ ಸಮಿತಿ ಅಧ್ಯ ಶಂಕರ ಕುಂಬಿ ಉಪಸ್ಥಿತರಿರುವರು ಎಂದು ಪರಿಸರ ಸಮಿತಿ ಕಾರ್ಯದಶಿರ್ ಡಾ. ವಿಲಾಸ ಕುಲಕಣಿರ್ ತಿಳಿಸಿದ್ದಾರೆ.