ಪರಿಸರ ಪ್ರಶಸ್ತಿಗೆ ಪ್ರಕಾಶ ಗೌಡರ ಭಾಜನ

IMG-20250619-WA0003.jpg
Published on

ಹುಬ್ಬಳ್ಳಿ: ಅರಣ್ಯ, ವನ್ಯ ಜೀವಿಗಳ ಸಂರಕ್ಷಣೆ ಮತ್ತು ಅವುಗಳ ಮಹತ್ವದ ಬಗ್ಗೆ ಜಾಗೃತಿ ಮೂಡಿಸುತ್ತ ಬಂದಿರುವ ಧಾರವಾಡದ ಪಕ್ಷಿಮಿತ್ರ ಪ್ರಕಾಶ ಗೌಡರ ಅವರು ಪ್ರತಿಷ್ಠಿತ "ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ -2025' ಗೌರವಕ್ಕೆ ಭಾಜನನಾಗಿದ್ದಾರೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಕಳೆದ ಹದಿನೈದು ವರ್ಷಗಳಿಂದ ಹಲವಾರು ಮರಗಳನ್ನು ನೆಟ್ಟು ಪಾಲನೆ, ಪೋಷಣೆ ಮಾಡಿ, ಹಲವಾರು ಜಲಮೂಲಗಳ ಸಂರಕ್ಷಣೆಗೆ ಶ್ರಮಿಸುತ್ತ ವನ್ಯ ಜೀವಿಗಳ ಸಂರಕ್ಷಣೆಗೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ.

ಈ ಪ್ರಶಸ್ತಿಯೊಂದಿಗೆ ಇನ್ನೂ ಹೆಚ್ಚು ಪರಿಸರ ಸೇವೆ ಮಾಡುವ ಸಂಕಲ್ಪ ಹೊಂದಿದ್ದೇನೆ. "ಪಕ್ಷಿಮಿತ್ರ' ಎಂದು ನಾಮಕರಣ ಮಾಡಿ ಪೋಷಿಸಿದ ಶಾಲೆ ಶಿಕ್ಷಕ ವೃಂದ, ನನ್ನ ಕಾರ್ಯಗಳಿಗೆ ಕೈ ಜೋಡಿಸಿದ ಗ್ರೀನ್ ಆರ್ಮಿ ಮಿತ್ರರು, ಮಾರ್ಗದರ್ಶನ ನೀಡಿದ ಹಿರಿಯರು, ಪ್ರೀತಿಯ ಧಾರವಾಡ, ಗದಗ ಹಾಗೂ ಸಮಗ್ರ ಉತ್ತರ ಕರ್ನಾಟಕ ಜನತೆಗೆ ಈ ಪ್ರಶಸ್ತಿಯನ್ನು ವಿನಮ್ರಪೂರ್ವಕನಾಗಿ ಸರ್ಮಪಿಸುತ್ತೇನೆ ಎಂದು ಪ್ರಕಾಶ ಗೌಡರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net