'ನಾವು ಪರಿಸರ ಪ್ರೀತಿಸಿದರೆ, ಪ್ರಕೃತಿ ನಮ್ಮನ್ನು ಪ್ರೀತಿಸುತ್ತದೆ'

WhatsApp Image 2023-06-05 at 3.30.30 PM
Published on

ವಿರಾಜಪೇಟೆ:

ಪ್ರತಿಯೊಬ್ಬರೂ ಪರಿಸರವನ್ನು ಪ್ರೀತಿಸಿದರೆ ಪ್ರಕೃತಿ ನಮ್ಮನ್ನು ಪ್ರೀತಿಸುತ್ತದೆ ಎಂದು ವಿರಾಜಪೇಟೆ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮಧೋಶ್ ಪೂವಯ್ಯ ಹೇಳಿದರು. ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ವಿರಾಜಪೇಟೆಯ ಪ್ರಗತಿ ವಿದ್ಯಾ ಸಂಸ್ಥೆಯಲ್ಲಿ ಮಲೆತಿರಿಕೆ ಬೆಟ್ಟದ ಶ್ರೀ ಶನೀಶ್ವರ ದೇವಸ್ಥಾನದ ಪ್ರಧಾನ ಅರ್ಚಕ, ಸಂಸ್ಥಾಪಕರೂ ಆದ ಶ್ರೀ ವಿ.ಜಿ ಕೃಷ್ಣಪ್ಪ ಸ್ವಾಮಿ ಜ್ಞಾಪಕಾರ್ಥವಾಗಿ ಶ್ರೀ ಶನೀಶ್ವರ ಭಕ್ತ ಜನ ಮಂಡಳಿ ವತಿಯಿಂದ ನಡೆದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮೊದಲೆಲ್ಲಾ ದಟ್ಟವಾದ ಅರಣ್ಯ ಇತ್ತು. ಬೆಟ್ಟಗುಡ್ಡಗಳು ಸದಾ ಹಸಿರಾಗಿದ್ದವು. ಅತಿ ಹೆಚ್ಚು ಮಳೆ ಇದ್ದರೂ ಪ್ರಕೃತಿ ನಡುವೆ ಮನುಷ್ಯನಿಗೆ ಉತ್ತಮ ಕಾಳಜಿ ಇತ್ತು. ಪ್ರಾಣಿ, ಪಕ್ಷಿಗಳು ಸಹ ಅರಣ್ಯದಲ್ಲಿ ಜೀವನ ಮಾಡುತ್ತಿದ್ದವು. ಕ್ರಮೇಣ ಅರಣ್ಯ ನಾಶಕ್ಕೆ ಮನುಷ್ಯನೇ ಕಾರಣವಾದ. ಪ್ರಾಣಿಗಳು ಕಾಡು ಬಿಟ್ಟು ನಾಡಿನತ್ತ ಬರುವಂತೆ ಆಯಿತು. ನಾವು ಪರಿಸರದ ಕಾಳಜಿ ವಹಿಸಿ ಪರಿಸರ ಸಂರಕ್ಷಣೆ ಮಾಡಬೇಕು ಎಂದರು.

ಸಮಾಜ ಸೇವಕ ಮೇರಿಯಂಡ ಸಂಕೇತ್ ಪೂವಯ್ಯ ಮಾತನಾಡಿ, ಹಲವಾರು ವರ್ಷಗಳಿಂದ ಶ್ರೀ ಶನೀಶ್ವರ ಭಕ್ತ ಜನ ಮಂಡಳಿಯವರು ಪ್ರತಿ ವರ್ಷ ಜೂನ್ ೫ ರಂದು ವಿಶ್ವ ಪರಿಸರ ದಿನವನ್ನು ಆಚರಿಸುತ್ತಿದ್ದು ವಿವಿಧ ಶಾಲಾ ಕಾಲೇಜುಗಳಲ್ಲಿ ಸಸಿ ನೆಡುವ ಮೂಲಕ ಪರಿಸರದ ಜಾಗೃತಿ ಕಾರ್ಯಕ್ರಮನ್ನು ಮಾಡುತ್ತ ಬಂದಿರುವುದ ಶ್ಲಾಘನೀಯ ಎಂದರು.
ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣದ ತಾಲೂಕು ಅಧ್ಯಕ್ಷ ಟಿ.ವಿ. ಅನೀಲ್ ಕುಮಾರ್, ಚಿತ್ರಕಲಾ ಶಿಕ್ಷಕ ಬಿ.ಆರ್. ಸತೀಶ್, ವಿರಾಜಪೇಟೆ ಅಪ್ಪಯ್ಯ ಸ್ವಾಮಿ ರಸ್ತೆಯ ಮಹಾ ಗಣಪತಿ ಆಂಜನೇಯ ದೇವಾಲಯದ ಧರ್ಮದರ್ಶಿ ಬಾಬಾಶಂಕರ್ ಮಾತನಾಡಿದರು.

ಪ್ರಗತಿ ವಿದ್ಯಾಸಂಸ್ಥೆ ಮುಖ್ಯಸ್ಥ ಮಾದಂಡ ತಿಮ್ಮಯ್ಯ, ಪ್ರಮುಖರಾದ ಎಂ. ಎಸ್. ಸೈನುದ್ದಿನ್, ಮಿಥುನ್, ರವಿ, ಶ್ರೀ ಶನೀಶ್ವರ ಭಕ್ತ ಜನ ಮಂಡಳಿಯ ಅಧ್ಯಕ್ಷ ಯುವರಾಜ್ ಕೃಷ್ಣ, ಪ್ರಗತಿ ವಿದ್ಯಾ ಸಂಸ್ಥೆ ಶಿಕ್ಷಕಿ ಪ್ರತಿಮಾ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net