ಶೃಂಗೇರಿ ಶಾರದಾ ಪೀಠದ ಜಗದ್ಗುರುಗಳ ಪುರಪ್ರವೇಶ

vidhushekara sri
ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಮೂರು ದಿನಗಳ ವಿವಿಧ ಕಾರ್ಯಕ್ರಮಗಳ ನಿಮಿತ್ತ ಸೋಮವಾರ ಶಿವಮೊಗ್ಗಕ್ಕೆ ಆಗಮಿಸಿದರು.
Published on

ಶಿವಮೊಗ್ಗ: ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಸೋಮವಾರ ಪುರ ಪ್ರವೇಶಗೈದರು. ಶ್ರೀಗಳು ಜೂ.26ರವರೆಗೆ ಶಿವಮೊಗ್ಗದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಸಂಜೆ 7.30ರ ಸುಮಾರಿಗೆ ನಗರದಕ್ಕೆ ಆಗಮಿಸಿದ ಶ್ರೀಗಳು ನೇರವಾಗಿ ಕೋಟೆ ಆಂಜನೇಯಸ್ವಾಮಿ ದೇವಾಲಯಕ್ಕೆ ತೆರಳಿ ದೇವರ ದರ್ಶನ ಪಡೆದರು.

ಬಳಿಕ ಕೋಟೆ ಭೀಮೇಶ್ವರ ದೇವಾಲಯಕ್ಕೆ ಭೇಟಿ ನೀಡಿದರು. ಅಲ್ಲಿಂದ ಜಗದ್ಗುರುಗಳನ್ನು ಶೋಭಾಯಾತ್ರೆಯೊಂದಿಗೆ ಶೃಂಗೇರಿ ಶಂಕರಮಠಕ್ಕೆ ಕರೆದೊಯ್ಯಲಾಯಿತು. ಶಂಕಮಠದಲ್ಲಿ ಫೂರ್ಣಕುಂಭದೊಂದಿಗೆ ಶ್ರೀಗಳನ್ನು ಭಕ್ತರು ಸ್ವಾಗತಿಸಿ ಧೂಳಿ ಪೂಜೆ ನೆರವೇರಿಸಿದರು. ಶ್ರೀಗಳು ಚಂದ್ರಮೌಳೀಶ್ವರ ಪೂಜೆ ಪೂರೈಸಿದರು.
ಜೂ.25ರ ಬೆಳಗ್ಗೆ 6ರಿಂದ ಶೃಂಗೇರಿ ಶಂಕರಮಠದಲ್ಲಿ 108 ನಾರಿಕೇಳ ಗಣಹೋಮ ಆರಂಭವಾಗಲಿದೆ. ಬೆಳಗ್ಗೆ 9ಕ್ಕೆ ಜಗದ್ಗುರುಗಳು ಪೂರ್ಣಾಹುತಿ ನೆರವೇರಿಸಲಿದ್ದಾರೆ. ಸಂಜೆ 5 ರಿಂದ ಗಾಯತ್ರಿ ಮಾಂಗಲ್ಯ ಮಂದಿರದಲ್ಲಿ ಶಾರದಾ ಶಂಕರ ಭಜನಾ ಮಂಡಳಿಗಳಿಂದ ಶಂಕರ ಭಗವಾತ್ಪದ ವಿರಚಿತ ಕಲ್ಯಾಣವೃಸ್ಟಸ್ತವ ಸ್ತೋತ್ರ, ಶಿವಪಂಚಾಕ್ಷರ ನಕ್ಷತ್ರ ಮಾಲಾ ಸ್ತೋತ್ರ ಹಾಗೂ ಲಕ್ಷ್ಮೀನೃಸಿಂಹ ಕುರಣಾರಸ ಸ್ತ್ರೋತ್ರಗಳ ಮಹಾ ಸಮರ್ಪಣೆ ಇರುತ್ತದೆ. ಭಕ್ತರು ಗುರುವಂದನೆ ಸಲ್ಲಿಸಲಿದ್ದಾರೆ. ನಂತರ ಜಗದ್ಗುರುಗಳು ಆಶೀರ್ವಚನ ನೀಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net