

ಉತ್ತರ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆ ಸುರಿಯುತ್ತಿರುವ ಕಾರಣ ವಿವಿಧ ಜಲಪಾತಗಳ ಪ್ರವೇಶ ನಿರ್ಬಂಧಿಸಲಾಗಿದೆ.
ಬಿರುಸಿನ ಮಳೆಯಿಂದಾಗಿ ತಾಲೂಕಿನ ಜಲಪಾತಗಳು ಮೈತುಂಬಿ ಧುಮ್ಮಿಕ್ಕುತ್ತಿವೆ. ಪ್ರವಾಸಿಗರ ಹಿತದೃಷ್ಟಿಯಿಂದ ಅರಣ್ಯ ಇಲಾಖೆ ಜಲಪಾತಗಳಿಗೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಿದೆ.
ತಾಲೂಕಿನ ಸಾತೊಡ್ಡಿ, ಮಾಗೋಡ, ಕಾನೂರು, ಶಿರ್ಲೆ ಜಲಪಾತಗಳಿಗೆ ಅನಿರ್ದಿಷ್ಟ ಅವಧಿಯವರೆಗೆ ಪ್ರವಾಸಿಗರ ಪ್ರವೇಶ ನಿಷೇಧಿಸಲಾಗಿದೆ.