ಫಲಪುಷ್ಪ ಪ್ರದರ್ಶನಕ್ಕೆ ಪ್ರವೇಶ ದುಬಾರಿ

Published on

ಮೈಸೂರು: ಲಿಂಗಾಂಬುದಿ ಕೆರೆಯ ಆವರಣದಲ್ಲಿ ನಡೆಯುತ್ತಿರುವ ಈ ವರ್ಷದ ದಸರಾ ಫಲಪುಷ್ಪ ಪ್ರದರ್ಶನಕ್ಕೆ ಪ್ರವೇಶ ದುಬಾರಿ ಆಗಿದ್ದು, ಸಾಮಾನ್ಯರಿಗೆ ಹೊರೆಯಾಗಿದೆ ಎಂದು ಕುವೆಂಪುನಗರದ ಬೂಕನಕೆರೆ ವಿಜೇಂದ್ರ ದೂರಿದ್ದಾರೆ.
ಕೇವಲ ಅರ್ಧ ಗಂಟೆಯಲ್ಲಿ ನೋಡಿ ಮುಗಿಸಬಹುದಾದ ಈ ಫಲಪುಷ್ಪ ಪ್ರದರ್ಶನಕ್ಕೆ ದೊಡ್ಡವರಿಗೆ 60 ರೂ., ಮಕ್ಕಳಿಗೆ 30 ರೂ. ನಿಗದಿಪಡಿಸಿದ್ದಾರೆ. ಇದೊಂದು ರೀತಿ ಹಗಲು ದರೋಡೆ ಎಂದು ಹೇಳಿಕೆಯಲ್ಲಿ ಆರೋಪಿಸಿದ್ದಾರೆ.
ವಿಖ್ಯಾತ ದಸರಾದ ಅಂಗವಾಗಿ ನಗರದ ಹೃದಯ ಭಾಗದಲ್ಲಿರುವ ಕುಪ್ಪಣ್ಣ ಪಾರ್ಕ್‌ನಲ್ಲಿ ಆಯೋಜಿಸಿರುವ ಮುಖ್ಯ ಫಲಪುಷ್ಪ ಪ್ರದರ್ಶನಕ್ಕೆ 40 ರೂ. ಮಾತ್ರ ಪ್ರವೇಶ ದರವಿದೆ. ಅಲ್ಲದೇ ಈ ಫಲಪುಷ್ಪ ಪ್ರದರ್ಶನದಲ್ಲಿ ಸಾವಿರಾರು ಬಗೆಯ ಪುಷ್ಪಗಳಿದ್ದು, ಇದನ್ನು ಪೂರ್ಣವಾಗಿ ನೋಡಲು ಕನಿಷ್ಠ 3 ರಿಂದ 4 ಗಂಟೆ ಸಮಯವಾದರೂ ಬೇಕಾಗುತ್ತದೆ. ಆದರೆ ಲಿಂಗಾಂಬುದಿ ಕೆರೆ ಆವರಣದಲ್ಲಿ ಅವೈಜ್ಞಾನಿಕವಾಗಿ ದರ ನಿಗದಿ ಪಡಿಸಿರವುದು ಸರಿಯಲ್ಲ. ಆದ್ದರಿಂದ ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net