ಎಸ್​ಸಿ, ಎಸ್​ಟಿ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆ

Siddheshwar organization expresses anger against Mushrif
Shivasharane Hemaraddi Mallamma Jayanti
Published on

ವಿಜಯಪುರ: ತಾಲೂಕಿನ ತಿಡಗುಂದಿ ಪಟ್ಟಣದ ಮಾನಸ ಗಂಗೋತ್ರಿ ಮಾದರಿ ಪ್ರತಿಷ್ಠಿತ ವಸತಿ ಶಾಲೆಯಲ್ಲಿ 5ನೇ ತರಗತಿಗೆ ಹಾಗೂ ಪಿಯುಸಿಗೆ ಖಾಲಿ ಇರುವ 6 ರಿಂದ 10 ನೇ ತರಗತಿಯ ಪರಿಶಿಷ್ಟ ಜಾತಿ (ಎಸ್​ಸಿ) ಹಾಗೂ ಪರಿಶಿಷ್ಟ ಪಂಗಡದ (ಎಸ್​ಟಿ) ವಿದ್ಯಾರ್ಥಿಗಳಿಗೆ ಪ್ರವೇಶ ಪರೀೆ ನಡೆಸುವುದರ ಮೂಲಕ ಅರ್ಹತೆ ಆಧಾರದ ಮೇಲೆ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಕನ್ನಡ ಮತ್ತು ಆಂಗ್ಲ ಮಾಧ್ಯಮಕ್ಕೆ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ.

ಪರೀೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪಿಯುಸಿ ಮುಗಿಯುವವರೆಗೆ ವಸತಿ ಸಹಿತ/ ರಹಿತ ಉಚಿತ ಶಿಕ್ಷಣ ನೀಡಲಾಗುವುದು. ಪ್ರತಿ ವರ್ಷ ಶೇ. 80 ರಿಂದ ಶೇ. 90 ಕ್ಕಿಂತ ಅಧಿಕ ಅಂಕ ಪಡೆದುಕೊಳ್ಳುವುದು ಕಡ್ಡಾಯ. ಸಂಸ್ಥೆ ವತಿಯಿಂದ ಯಾವುದೇ ಜಾತಿಯ ಮಾಜಿ ಯೋಧರ ಮಕ್ಕಳಿಗೆ, ಅನಾಥ, ಅಂಗವಿಕಲರ ಮಕ್ಕಳಿಗೆ ಮತ್ತು ಕ್ರೀಡೆಯಲ್ಲಿ ಸಾಧನೆಗೈದ ಮಕ್ಕಳಿಗೂ ಕೂಡಾ 6 ರಿಂದ ಪಿಯುಸಿ ವರೆಗೆ ಪ್ರತಿಭಾ ಪರೀೆ ನಡೆಸಿ 6ನೇ ತರಗತಿಯಿಂದ ಪಿಯುಸಿ, ಐಐಟಿ&ಜೆಇಇ, ನೀಟ್​, ಸಿಇಟಿ ಕೋಚಿಂಗ್​ ವರೆಗೆ ಉಚಿತ ಶಿಕ್ಷಣ ನೀಡಲಾಗುವುದು.

ಸಂಸ್ಥೆಯ ಪರೀಾ ಭವನದಲ್ಲಿ ಮಾ. 9 ಹಾಗೂ ಮೇ 18 ರಂದು ಬೆಳಿಗ್ಗೆ 10 ರಿಂದ 1 ರವರೆಗೆ ಪ್ರವೇಶ ಪರೀೆ ನಡೆಯಲಿವೆ. ಪ್ರವೇಶ ಪರೀೆಯ ಅರ್ಜಿಗಳನ್ನು ಸಂಸ್ಥೆಯ ಕಚೇರಿಯಲ್ಲಿ ಪಡೆದುಕೊಳ್ಳಬಹುದು ಅಥವಾ (ಡಿಡಿಡಿ.ಜಠಠಠಿಜಿಛಚಜ್ಠ್ಞಛಜಿ.್ಚಟಞ) ವೆಬ್​ ಸೈಟ್​ಗೆ ಭೇಟಿ ನೀಡಿ ಆನ್​ಲೈನ್​ನಲ್ಲಿ ಕೂಡ ಪಡೆಯಬಹುದು.

ಅರ್ಜಿ ನಮೂನೆಯ ಎಲ್ಲ ದಾಖಲಾತಿ ಜತೆಗೆ ಪರೀೆಗೆ ಎರಡು ದಿನ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಮೊ. 9448118593, 8123460582, 9632600582, 9606081840 ಕ್ಕೆ ಸಂಪರ್ಕಿಸುವಂತೆ ಅಲ್ಲದೆ, ತಿಡಗುಂದಿ ಪಟ್ಟಣದ ಸೊಲ್ಲಾಪುರ ರಸ್ತೆಯ ವಿದ್ಯಾಗಿರಿಯ ವಿದ್ಯಾವಿಕಾಸ ಸೌಧದಲ್ಲಿರುವ ಮಾನಸಗಂಗೋತ್ರಿ ಪ್ರತಿಷ್ಠಿತ ವಸತಿ ಶಾಲೆಗೆ ಭೇಟಿ ನೀಡುವಂತೆ ಪ್ರಕಟಣೆಯು ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net