ಮನಸೂರೆಗೊಂಡ ಮಕ್ಕಳ ಅಭಿನಯ

KALOTSAVA
Published on

ಲಕ್ಷ್ಮೇಶ್ವರ: ತಾಲೂಕಿನ ರಾಮಗೇರಿಯ ಜಿ.ಎಫ್. ಉಪನಾಳ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಶಿಗ್ಲಿ ಮತ್ತು ಸೂರಣಗಿ ಕ್ಲಸ್ಟರ್‌ರಗಳ ಪ್ರೌಢಶಾಲಾ ವಿಭಾಗದ ಕಲೋತ್ಸವ, ಪ್ರತಿಭಾ ಕಾರಂಜಿ ಸ್ಫರ್ಧೆಯಲ್ಲಿ ಒಡೆಯರ ಮಲ್ಲಾಪುರದ ಮುರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿಗಳು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಪ್ರಥಮ ಸ್ಥಾನ: ಶ್ರೇಯಸ್ ಅರಿಕೇರಿ (ಛದ್ಮವೇಶ) ವಿಕಾಸ ಗುಡಿಮನಿ (ಚಿತ್ರಕಲೆ) ಚಂದನಾ ಪವಾರ ಹಿಂದಿ ಭಾಷಣ, ತಿರುಪತಿ ಮುದ್ಲಾಪೂರ ಮಿಮಿಕ್ರಿ, ಅಭಿಷೇಕ ಲಮಾಣಿ ಜಾನಪದ ಗೀತೆ, ಯಲ್ಲಮ್ಮ ಕೆರೂರ ಹಾಗೂ ಸಂಗಡಿಗರು ಜಾನಪದ ನೃತ್ಯ, ತೇಜಶ್ವಿನಿ ಲಮಾಣಿ ಘಜಲ್‌ನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ದ್ವಿತೀಯ ಸ್ಥಾನ: ಅಕ್ಷಯ ಕಡ್ಡಿಪೂಜಾರ (ಚರ್ಚಾ ಸ್ಪರ್ಧೆ) ಬಸವಣ್ಣೆವ್ವ ಪಶುಪತಿಹಾಳ (ರಂಗೋಲಿ) ಚೈತ್ರಾ ಕೋಷ್ಠಿ (ಕವನ ವಾಚನ), ಜಾನ್ವಿ ಲಮಾಣಿ ಸಂಗಡಿಗರು (ಕವ್ವಾಲಿ), ಶ್ರದ್ಧಾ ನಡುವಿನಮನಿ (ಧಾರ್ಮಿಕ ಪಠಣ), ಸುಕನ್ಯಾ ದಾಸರ (ಭಾವಗೀತೆ),
ಹೇಮಾ ಅಂಗಡಿ ಕನ್ನಡ ಕಂಠಪಾಠದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಪ್ರಾಚಾರ್ಯರು, ಶಿಕ್ಷಕವೃಂದ, ನಿಲಯ ಪಾಲಕ ಮತ್ತು ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net