ಮೆರಗುಗೊಳಿಸಿದ ಭರತನಾಟ್ಯ ಪ್ರದರ್ಶನ

FotoJet (1) shashi
Published on

ಹುಳಿಯಾರು: ಪಟ್ಟಣದ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ 75ನೇ ವರ್ಷದ ಗಣೇಶೋತ್ಸವ ಅಂಗವಾಗಿ ಕನಕಪ್ರಿಯ ನಾಟ್ಯಕಲಾ ಕೇಂದ್ರದಿಂದ ಏರ್ಪಡಿಸಿದ್ದ ಭರತನಾಟ್ಯ ಪ್ರದರ್ಶನ ನೋಡುಗರ ಮನ ಸೂರೆಗೊಳಿಸಿತು.

ಭಾವ ರಾಗ ತಾಳಪೂರಿತವಾದ ನೃತ್ಯ ಬಂದ ಭರತನಾಟ್ಯ ಪದ್ಧತಿಯಲ್ಲಿ ಮೊದಲು ರಂಗಕ್ಕೆ ಪುಷ್ಪವನ್ನು ಅರ್ಪಿಸಿ ರಂಗಾದಿ ದೇವತೆಗಳನ್ನು ಸ್ಮರಿಸಿ ನಾವು ವಾಡುವ ಕಾರ್ಯದಲ್ಲಿ ಯಾವುದೇ ವಿಘ್ನ ಬಾರದಿರಲಿ ಎಂದು ವಿನಾಯಕನನ್ನು ಕುರಿತು ಹುಳಿಯಾರಿನ ಮಕ್ಕಳು ಪುಷ್ಪಾಂಜಲಿ ನೃತ್ಯ ನಡೆಸಿಕೊಟ್ಟರು.ನಂತರ ಒಡಿಶಾ ಪದ್ಧತಿಯಲ್ಲಿ ಒಡಿಶಾ ನೃತ್ಯ ಕಲಾವಿದೆ ವಿದುಷಿ ರಾ.ಸೌಮ್ಯ ರಂಗಸ್ವಾಮಿ ಅವರು ಮತ್ತು ವಿದ್ವಾನ್ ಕೆ.ನಾಗರಾಜ್ ಒಡಿಶಾ ಪದ್ಧತಿಯ ಮಂಗಳಾಚಾರಣ ನೃತ್ಯ ಪ್ರದರ್ಶನ ವಾಡಿದರು.

ಭರತನಾಟ್ಯ ಮತ್ತು ಒಡಿಶಾ ಶೈಲಿಯಲ್ಲಿ ರಾಷ್ಟ್ರಕವಿ ಕುವೆಂಪು ರಚನೆಯ ‘ಬಾಗಿಲೊಳು ಕೈಮುಗಿದು ಒಳಗೆ ಬಾ ಯಾತ್ರಿಕನೆ’ ಕವನಕ್ಕೆ ಜಿಗಲ್ ಬಂದಿ ರೀತಿಯಲ್ಲಿ ನರ್ತಿಸಿದರು. ನಂತರ ವ್ನಿದ್ವಂಶಕಂ ವಿನಾಯಕಂ ಕೃತಿಯನ್ನು ಎಂ.ಕೆ.ಚೇತನ್ ಅವರು ಹುಳಿಯಾರಿನ ಪುಟಾಣಿ ಮಕ್ಕಳು ಲಕ್ಷ್ಮೀ, ಶಾರದೆ, ಗಣಪ ಹಾಗೂ ನಟರಾಜನನ್ನು ಕುರಿತ ಶ್ಲೋಕಗಳಿಗೆ ನರ್ತಿಸಿದರು.

ಹಿರಿಯ ಮಕ್ಕಳು ಪುರಂದರ ದಾಸರ ಗಜವದನ ಬೇಡುವೆ, ಕನಕದಾಸರ ಯಾದವರಾಯ ಬಂದಾವನಗಳು ನೃತ್ಯ ಪ್ರದರ್ಶನ ನೀಡಿದರು. ವಿದ್ವಾನ್ ನಾಗರಾಜ್ ಅವರು ಅನ್ನವಾಚಾರ್ಯರು ರಚಿಸಿರುವ ಶ್ರೀಮನ್ನಾರಾಯಣ ಕೃತಿಯಲ್ಲಿ ವಿಷ್ಣುವಿನ ದಶಾವತಾರಗಳನ್ನು ಪ್ರದರ್ಶಿಸಿದರು. ಕನಕದಾಸರ ನಮ್ಮಮ್ಮ ಶಾರದೆ ಉವಾಮಹೇಶ್ವರಿ ದೇವರ ನಾಮವನ್ನು ನರ್ತಿಸಿದರು. ಹೊಸದುರ್ಗದ ಮಕ್ಕಳು ಚಂದ್ರಚೂಡ ಶಿವಶಂಕರ ಪಾರ್ವತಿ ಮೃತ್ಯು ಪ್ರದರ್ಶನ ನೀಡಿ ಮೆಚ್ಚುಗೆ ಗಳಿಸಿದರು.

ಕೊನೆಯದಾಗಿ ಮನುಷ್ಯ ಅಹಂಕಾರಕ್ಕೆ ಯಾವ ರೀತಿಯಲ್ಲಿ ತನ್ನನ್ನು ತಾನೇ ಭಸ್ಮ ವಾಡಿಕೊಳ್ಳುತ್ತಾನೆ ಎಂದು ತೋರಿಸುವ ಮೋಹ ವಾಯೆಗೆ ಬಲಿಯಾದ ಮೋಹಿನಿ ಭಸ್ಮಾಸುರ ನೃತ್ಯ ರೂಪಕವನ್ನು 45 ನಿಮಿಷಗಳ ಕಾಲ ಪ್ರದರ್ಶಿಸಿ ಸಭಿಕರನ್ನು ಮಂತ್ರಮುಗ್ಧರಾಗಿಸಿದರು.

ಗಣಪತಿ ದೇವಸ್ಥಾನದ ಅಧ್ಯಕ್ಷ ಮೋಹನ್, ಕಾರ್ಯದರ್ಶಿ ಬಸವರಾಜು, ತಾಪಂ ವಾಜಿ ಸದಸ್ಯ ಎಚ್.ಎನ್.ಕುವಾರ್, ಸಿನಿವಾ ನಿರ್ವಾಪಕ ನಂದಿಹಳ್ಳಿ ಶಿವಣ್ಣ, ಆಯುರ್ವೇದ ವೈದ್ಯ ಬಸವರಾಜ ಪಂಡಿತ್, ಕೆಂಕೆರೆ ಗ್ರಾಪಂ ಅಧ್ಯಕ್ಷ ಮಂಜುನಾಥ್, ಸಿಆರ್‌ಪಿ ಕವಿತಾ, ದೇವಸ್ಥಾನ ಕಮಿಟಿಯ ತಮ್ಮಯ್ಯ, ಚನ್ನಬಸವಯ್ಯ, ಕಾಂತರಾಜು, ಯತೀಶ್, ಅಂಜನ್ ಕುವಾರ್, ಚೇತನ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net