ಜೂ.22 ರಂದು ಮನರಂಜನಾ ಕಾರ್ಯಕ್ರಮ

raichur
raichur
Published on

ರಾಯಚೂರು ರಂಗ ಕುಸುಮ ಸಾಂಸ್ಕೃತಿಕ ಕಲಾ ಸಂಘದಿಂದ ಜೂ.22 ರಂದು ನಗರದ ಪಂ.ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಸಂಜೆ 6 ಗಂಟೆ ಅಕ್ಷರ ಮಾಲೆ ಸಾಂಸ್ಕೃತಿ ಮನರಂಜನಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಸಿದ್ದೇಶ ವಿರಕ್ತಮಠ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಾನಿಧ್ಯವನ್ನು ಕಿಲ್ಲೇ ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯರು, ನಂದ್ಯಾಳ ಮಠದ ಶ್ರೀ ಶರಣ ಜಯೇಂದ್ರ ತಾತನವರುವಹಿಸಲಿದ್ದಾರೆ. ಸಣ್ಣ ನೀರಾವರಿ ಸಚಿವ ಎನ. ಎಸ್.ಬೋಸರಾಜ ಉಪಸ್ಥಿತಿ ಇರುವರು. ಅಧ್ಯಕ್ಷತೆಯನ್ನು ಮಹಾಂತೇಶ ಪಾಟೀಲ್ ಅತ್ತನೂರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಚಂದ್ರಶೇಖರ ಪಾಟೀಲ್ ಮಿರ್ಜಾಪುರು, ಡಾ.ಮಹಾಲಿಂಗಪ್ಪ, ಡಾ.ಕಬ್ಬಪ್ಪ ಹರಕಲ್, ಡಾ.ನಾಗರಾಜ ಗದ್ವಾಲ್, ಡಾ.ಅಜೀರ ಪಾಷಾ, ಡಾ.ಜಿ.ಕೃಷ್ಣಮೂರ್ತಿ ಸೇರಿ ಆನೇಕರು ಭಾಗಿಯಾಗಲಿದ್ದಾರೆ.

ಕಾರ್ಯಕ್ರಮಕ್ಕೆ ಚಿತ್ರನಟ ಅಭಿಜಿತ್ ಚಾಲನೆ ನೀಡಲಿದ್ದು, ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಪಾಲಿಕೆ ಉಪಾಧ್ಯಕ್ಷ ಸಾಜಿದ್ ಸಮೀರ್, ನಿವೃತ್ತ ಸಾರಿಗೆ ಆಯುಕ್ತ ಡಾ.ಶಿವರಾಜ ಪಾಟೀಲ್, ರಮೇಶ ನಾಡಗೌಡ, ಸುರೇಶ ಗುರುಸ್ವಾಮಿ ಸೇರಿ ಆನೇಕರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕೆ. ಬಾಳಪ್ಪ ಪಾಟೀಲ್, ಎ.ವಸಂತ, ಮರಿಲಿಂಗಪ್ಪ, ನರಸಪ್ಪ ದೇವಸೂಗೂರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net