ರಂಜಿಸಿದ ಸ್ವರ ಶ್ರದ್ಧಾಂಜಲಿ ಸಂಗೀತ ಕಾರ್ಯಕ್ರಮ

20 Jaggu 7
ಬೆಳಗಾವಿ ಜೆಎನ್‌ಎಂಸಿ ಆವರಣದ ಕೆಎಲ್ಇ ಸಂಗೀತ ಮಹಾವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ಸ್ವರ ಶ್ರದ್ಧಾಂಜಲಿ ಸಂಗೀತ ಕಾರ್ಯಕ್ರಮ ಉದ್ಘಾಟಿಸಲಾಯಿತು. ಪಂ.ಸದಾಶಿವ ಐಹೊಳೆ, ನಿತಿನ ಗಂಗಾನೆ, ಡಾ. ರಾಜೇಂದ್ರ ಭಾಂಡಂಕರ,ಪಂ.ರಾಜಾರಾಮ ಅಂಬರಡೆಕರ ಇತರರಿದ್ದರು.
Published on

ಬೆಳಗಾವಿ: ಜೆಎನ್‌ಎಂಸಿ ಆವರಣದಲ್ಲಿರುವ ಕೆಎಲ್ಇ ಸಂಗೀತ ಮಹಾವಿದ್ಯಾಲಯದ ವಾರ್ಷಿಕೋತ್ಸವ ಹಾಗೂ ದಿ.ಪಂ. ಹಯವದನ ಜೋಶಿ ಅವರ 14ನೇ ಪುಣ್ಯಸ್ಮರಣೆ ನಿಮಿತ್ತ ಬುಧವಾರ ಸ್ವರ ಶ್ರದ್ಧಾಂಜಲಿ ಸಂಗೀತ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮಕ್ಕೆ ಧಾರವಾಡ ಆಕಾಶವಾಣಿ ನಿಲಯದ ಕಲಾವಿದ ಪಂ.ಸದಾಶಿವ ಐಹೊಳೆ ಎರಡು ಗಂಟೆಗಳ ಕಾಲ ಹಿಂದುಸ್ತಾನಿ ಶಾಸೀಯ ಸಂಗೀತ ಸೇವೆ ನೀಡಿ ಪ್ರೇಕ್ಷಕರನ್ನು ರಂಜಿಸಿದರು.

ಯಾದವೇಂದ್ರ ಪೂಜಾರಿ ಹಾರ್ಮೋನಿಯಂ ಸಾಥ್ ಹಾಗೂ ಪ್ರಸಾದ ಮಡಿವಾಳರ, ರಾಹುಲ್ ಮಂಡೂಲ್ಕರ್ ತಬಲಾ ಸಾಥ್ ನೀಡಿದರು. ಕಾರ್ಯಕ್ರಮಕ್ಕೆ ಅತಿಥಿಯಾಗಿ ಕೆಎಲ್ಇ ವಿಶ್ವವಿದ್ಯಾಲಯದ ಉಪಕುಲಪತಿ ನಿತಿನ್ ಗಂಗಾನೆ, ಸಂಗೀತ ಮಹಾವಿದ್ಯಾಲಯದ ಸಂಯೋಜಕ ಡಾ.ರಾಜೇಂದ್ರ ಭಾಂಡಂಕರ ಸಂಗೀತ ವಿಭಾಗದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಗೀತ ಮಹಾವಿದ್ಯಾಲಯದ ಪ್ರಾಂಶುಪಾಲ ಪಂ.ರಾಜಾರಾಮ ಅಂಬರಡೆಕರ ಸ್ವಾಗತಿಸಿದರು. ಸಂಗೀತ ಮಹಾವಿದ್ಯಾಲಯದ ಪ್ರಾಧ್ಯಾಪಕಿ ಡಾ ಸುನಿತಾ ಪಾಟೀಲ ಪರಿಚಯಿಸಿದರು. ಡಾ.ದುರ್ಗಾ ನಾಯಕರಣಿ ನಿರೂಪಿಸಿದರು. ಸಂಗೀತಾ ಬಾಂದೆಕರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net