

ಹುಬ್ಬಳ್ಳಿ : ಇಲ್ಲಿನ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಂಗಣದಲ್ಲಿ ಇತ್ತೀಚೆಗೆ ‘ ಉದ್ಯಮಗಳಲ್ಲಿ ನಾವೀನ್ಯತೆ : ಉದ್ದಿಮೆಗಳು ನಾವಿನ್ಯತೆಯ ಸಂಸ್ಕೃತಿ ಸಂವಹನ ಪರಿಕಲ್ಪನೆ ಅನುಷ್ಠಾನ’ ಕುರಿತ ಕಾರ್ಯಾಗಾರ ಆಯೋಜಿಸಲಾಗಿತ್ತು.
ಭಾರತೀಯ ಉದ್ಯಮಗಳಲ್ಲಿ ನಾವೀನ್ಯತೆಯ ಆತ್ಮನಿರ್ಭರ ಭಾರತದ ಅಭಿವೃದ್ಧಿ ಗುರಿಗಳೊಂದಿಗೆ ಹೊಂದಾಣಿಕೆಯಲ್ಲಿ ಸಂಸ್ಕೃತಿಯನ್ನು ಬೆಳೆಸುವ ಗುರಿಯೊಂದಿಗೆ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ನಿರ್ದಿಷ್ಟ ಗಮನವನ್ನು ಇಟ್ಟುಕೊಂಡು ಈ ಕಾರ್ಯಾಗಾರ ಏರ್ಪಡಿಸಲಾಗಿತ್ತು.
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸಲಹೆಗಾರ ಡಾ.ಪ್ರವೀಣ ಅರೋರಾ, ಸೆಂಟರ್ ಫಾರ್ ನಾಲೆಜ್ ಐಡಿಯಾಸ್ ಆಂಡ್ ಡೆವಲಪ್ವೆುಂಟ್ ಸ್ಟಡೀಸ್ ನಿರ್ದೇಶಕ ಡಾ.ಪ್ರದೋಶ ನಾಥ್ ಮತ್ತು ಉದ್ಯಮಗಳ ನಾವಿನ್ಯತೆಯ ನೇತೃತ್ವ ವಹಿಸಿದ್ದ ಡಾ. ಅರವಿಂದ ಚಿಂಚುರೆ ಸೇರಿದಂತೆ ಗಣ್ಯರು ತಾಂತ್ರಿಕ ಮತ್ತು ತಾಂತ್ರಿಕವಲ್ಲದ ನಾವೀನ್ಯತೆಯ ವಿವಿಧ ಅಂಶಗಳ ಕುರಿತು ತಮ್ಮ ಪರಿಣಿತಿಯನ್ನು ಉದ್ಯಮಿಗಳೊಂದಿಗೆ ಹಂಚಿಕೊಂಡರು.
ಹೊಸ ಉತ್ಪನ್ನಗಳು ಮತ್ತು ಪ್ರಕ್ರಿಯೆಗಳನ್ನು ರಚಿಸುವ ತಂತ್ರಗಳ ಕುರಿತು ರ್ಚಚಿಸಲಾಯಿತು. ಹಾಗೆಯೇ ಪರಿಣಾಮಕಾರಿ ನಾವೀನ್ಯತೆಗಾಗಿ ಇನ್ನೋವೇಶನ್ ಸರ್ಕಲ್ ಪರಿಕಲ್ಪನೆಯ ಅನುಷ್ಠಾನ ಎಂಟರ್ಪ್ರೈಸ್ ಮಟ್ಟದಲ್ಲಿ ನಿರ್ವಹಣೆ ಕುರಿತು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗಣ್ಯರು ವಿವರಿಸಿದರು.
ಈ ಕಾರ್ಯಾಗಾರವು ಒಳನೋಟವುಳ್ಳ ಚರ್ಚೆಗಳಿಗೆ, ವಿಚಾರ ವಿನಿಮಯಕ್ಕೆ ಮತ್ತು ವೇದಿಕೆಯನ್ನು ಒದಗಿಸಿತು. ನಾವೀನ್ಯತೆ ಸಂಸ್ಕೃತಿ ಮತ್ತು ಆರ್ಥಿಕ ಬೆಳವಣಿಗೆ ಮತ್ತು ಸ್ಪರ್ಧಾತ್ಮಕತೆ ಉದ್ಯಮ ತಜ್ಞರು, ಉದ್ಯಮಿಗಳು ಮತ್ತು ಮಧ್ಯಸ್ಥಗಾರರ ನಡುವೆ ಸಂವಹನಕ್ಕೆ ಅವಕಾಶಗಳನ್ನು ಒದಗಿಸಿತು. ಆರ್ಥಿಕ ಬೆಳವಣಿಗೆ ಮತ್ತು ಸ್ಪರ್ಧಾತ್ಮಕತೆಯ ಕುರಿತು ಮತ್ತು ಸ್ವಾವಲಂಬನೆಯ ಭಾರತದ ದೃಷ್ಟಿಯ ಸಾಕ್ಷಾತ್ಕಾರಕ್ಕೆ ಉಪಯುಕ್ತ ಮಾಹಿತಿಯನ್ನು ನೀಡಲಾಯಿತು.
ನ್ಯಾಷನಲ್ ಕೌನ್ಸಿಲ್ ಫಾರ್ ಸೈನ್ಸ್ ಆಂಡ್ ಟೆಕ್ನಾಲಜಿ ಕಮ್ಯುನಿಕೇಷನ್ ಸೇರಿದಂತೆ ಪಾಲುದಾರರು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ,ಕೋಲ್ಕತ್ತಾದ ಸೆಂಟರ್ ಫಾರ್ ನಾಲೆಜ್ ಐಡಿಯಾಸ್ ಆಂಡ್ ಡೆವಲಪ್ವೆುಂಟ್ ಸ್ಟಡೀಸ್ ಮತ್ತು ಗ್ಲೋಬಲ್ಪ್ರಾಜೆಕ್ಟ್್ಸ ಆಂಡ್ ಸರ್ವೀಸಸ್ ಸಹಯೋಗದೊಂದಿಗೆ ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ಸಂಸ್ಥೆಯ ಅಧ್ಯಕ್ಷ ಎಸ್.ಪಿ. ಸಂಶಿಮಠ, ಉಪಾಧ್ಯಕ್ಷರಾದ ಸಂದೀಪ ಬಿಡಸಾರಿಯಾ, ಪ್ರವೀಣ ಅಗಡಿ, ಗೌರವ ಕಾರ್ಯದರ್ಶಿ ರವೀಂದ್ರ ಬಳಿಗಾರ, ಕಾರ್ಯಕ್ರಮ ಸಮಿತಿ ಅಧ್ಯಕ್ಷ ಶಶಿಧರ ಶೆಟ್ಟರ, ಮಾಜಿ ಅಧ್ಯಕ್ಷ ರಮೇಶ ಪಾಟೀಲ, ಕೈಗಾರಿಕೋದ್ಯಮಿಗಳಾದ ಸುಧೀರ ಮಾಂಡೆ, ಶಿವಾನಂದ ಅವಟಿ, ಬಳ್ಳಾರಿ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಬಿ. ಮಹಾರುದ್ರಗೌಡ, ಹಿರಿಯ ಉಪಾಧ್ಯಕ್ಷ ಯಶವಂತರಾಜ ನಾಗಿರೆಡ್ಡಿ ಹಾಗೂ ಪದಾಧಿಕಾರಿಗಳು ಮತ್ತು ಗದಗ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಈಶ್ವರಪ್ಪ ಮುನವಳ್ಳಿ ಭಾಗವಹಿಸಿದ್ದರು.