

ರಾಯಚೂರು ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ವರ್ಗೀಕರಣಕ್ಕೆ ನ್ಯಾ.ನಾಗಮೋಹನದಾಸ್ ನೇತೃತ್ವದ ಏಕ ಸದಸ್ಯ ಆಯೋಗದಿಂದ ಏ.೦೬ ರಿಂದ ಮನೆ ಮನೆ ಸಮೀಕ್ಷೆ ಪ್ರಾರಂಭಿಸಲಾಗುವುದು, ಛಲವಾದಿ ಹಾಗೂ ಉಪ ಜಾತಿಗಳು ಮೂಲ ಜಾತಿಂiÀi ಮಾಹಿತಿಯನ್ನು ದಾಖಲೀಕರಿಸಬೇಕೆಂದು ಒಳ ಮೀಸಲಾತಿ ಹೋರಾಟ ಸಮಿತಿ ರಾಜ್ಯ ಸಂಚಾಲಕ ರವೀಂದ್ರನಾಥ ಪಟ್ಟಿ ತಿಳಿಸಿದರು.
ನಗರ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಲಗೈ ಸಮೂದಾಯ ಛಲವಾದಿ, ಹೊಲೆಯ, ಬೇಗಾರ್, ಬ್ಯಾಗಾರ್, ಮಾಲಾ, ಮಹಾರ್ ಜಾತಿಗಳ ಜನರು ಸಮೀಕ್ಷೆ ಬರುವ ಗಣತಿದಾರರಿಗೆ ಆಧಾರ ಕಾರ್ಡ ನೀಡಿ ಪೂರ್ವಜರು ಬರೆಸಿರುವ ಜಾತಿಯನ್ನೇ ಬರೆಯಿಸಿ ಮಾಹಿತಿ ನೀಡಬೇಕು. ಜಾತಿಪ್ರಮಾಣ
ಪ್ರಮಾಣದಲ್ಲಿರುವ ಜಾತಿಯನ್ನು ದಾಖಲಿಸಬೇಕು.
ಸಮಾಜ ಮುಖಂಡರುಗಳು, ಕಾರ್ಯಕರ್ತರು ಪ್ರತಿ ಗ್ರಾಮಗಳಲ್ಲಿ ವಾರ್ಡಗಳಲ್ಲಿ ಗಣತಿದಾರರಿಗೆ ನಿಖರ ಮಾಹಿತಿ ನೀಡಬೇಕು. ರಾಜ್ಯದಲ್ಲಿನ ಎಲ್ಲಾಕುಟುಂಬಗಳು ನಮೂಮಾಹಿತಿಯನ್ನು ಸರ್ಕಾರ ಸಂಗ್ರಹಿಸಿದ್ದು, ಗೊಂದಲವಾಗದAತೆ ಮೂಲ ಜಾತಿಯನ್ನು ನಮೂದಿಸಬೇಕು ಎಂದು ವಿನಂತಿಸಿದರು.
೨೦೧೧ ಜನಗಣತಿಯಂತೆ ೧೦,೪೭,೪೯೯೨ ಪರಿಶಿಷ್ಟ ಜಾತಿಗಳ ಜನಸಂಖ್ಯೆಯಿದ್ದು ನಿಖರ ಮಾಹಿತಿ ಲಭ್ಯವಾದಲ್ಲಿ ಮಾತ್ರ ಮೀಸಲು ಪ್ರಮಾಣ ಪಡೆಯಲು ಸಾಧ್ಯವಿದೆ. ಸಮೂದಾಯ ಎಲ್ಲ ಜನರು ಸಹಕರಿಸುವಂತೆ ಮನವಿ ಮಾಡಿದರು. ಮತಾಂತರಗೊAಡವರು ಮೀಸಲು ದುರ್ಬಳಕೆ ಮಾಡುವದನ್ನು ನಿಲ್ಲಿಸಬೇಕು ಎಂದರು.
ಈ ಸಂದರ್ಬದಲ್ಲಿ ಸಮಾಜ ಮುಖಂಡರುಗಳಾದ ಜಗನ್ನಾಥ ಸುಂಕಾರಿ, ಶಿವರಾಜ ಜಾನೇಕಲ್, ಭಾಸ್ಕರರಾಜ್, ನರಸಿಂಹಲು ನೆಲಹಾಳ, ತಮ್ಮಣ್ಣ, ಯಲ್ಲಪ್ಪ ಬೊಮ್ಮನಾಳ, ಪರಶುರಾಮ ಇದ್ದರು.