

ರಾಯಚೂರು ಪರಿಶಿಷ್ಟ ಜಾತಿಗಳ ಒಳ ಮೀಸಲಿಗಾಗಿ ನಡೆಯಲಿರುವ ಗಣತಿಯಲ್ಲಿ ಪರಿಶಿಷ್ಟ ಜಾತಿ ಉಪಜಾತಿ ಕ್ರಮ ಸಂಖ್ಯೆ ೨೩ರಲ್ಲಿ ವಡ್ಡರ್ ಎಂದು ನಮೂದಿಸುವಂತೆ ಭೋವಿ ವಡ್ಡರ ಯುವ ವೇದಿಕೆ ಜಿಲ್ಲಾಧ್ಯಕ್ಷ ಈರಣ್ಣ ಸಿನ್ನಾನಪಲ್ಲೆ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪರಿಶಿಷ್ಟ ಜಾತಿಗಳ ಜನಸಂಖ್ಯೆ ಗಣತಿ ಪ್ರತಿ ಗ್ರಾಮಗಳಲ್ಲಿ ನಡೆಯಲಿರುವ ಜಾತಿ ಗಣತಿದಾರರಿಗೆ ಸಮೂದಾಯ ಜನರು ವಡ್ಡರ್ ಎಂದು ನಮೂದಿಸಬೇಕು. ಸಮರ್ಪಕ ಮಾಹಿತಿ ದಾಖಲಿಸದಿದ್ದರೆ ಮಾತ್ರ ಮೀಸಲಾತಿ ಪಡೆಯಲು ಸಾಧ್ಯವಾಗುತ್ತದೆ.
ಕಡಿಮೆ ಸಂಖ್ಯೆಯಲ್ಲಿದೆ ಎಂದು ಕೆಲವರು ಗುಲ್ಲು ಎಬ್ಬಿಸುತ್ತಿದ್ದಾರೆ. ಖಚಿತ ಮಾಹಿತಿ ಸಂಗ್ರಹಿಸಲು ಜನಗಣತಿಯೇ ಆಧಾರವಾಗಿದೆ. ಶೇ.೧೧ ರಷ್ಟು ವಡ್ಡರ ಜನಸಂಖ್ಯೆ ಹೊಂದಿದ್ದೇವೆ. ವಡ್ಡರ್ ಸಮುದಾಯದಲ್ಲಿ ಅನೇಕ ಉಪ ಜಾತಿಗಳಿವೆ. ವಡ್ಡರ್ ,ಒಡರ್, ಭೋವಿ ಬೋವಿ, ಕಲ್ಲು ವಡ್ಡರ್, ಮಣ್ಣವ ಡ್ಡರ್ ಎಂದೆಲ್ಲ ಇದ್ದರೂ ಗಣತಿಯಲ್ಲಿ ವಡ್ಡರ್ ಎಂದು ನಮೂದಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ದೊಡ್ಡ ದೇವನಪಲ್ಲಿ, ನರಸಿಂಹಲು ತುರುಕನಡೋಣಿ, ಹೊನ್ನಪ್ಪ ಪುರತಿಪ್ಲಿ ಇದ್ದರು.