

ರಾಯಚೂರು ರಾಜ್ಯದಾದ್ಯಂತ ಭಾನುವಾರದಿಂದ ನಡೆಯಲಿರುವ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಗಣತಿಯಲ್ಲಿ ಛಲವಾದಿ ಸಮೂದಾಯ ಜನರು ಮೂಲ ಜಾತಿಯನ್ನು ನಮೂದಿಸುವ ಮೂಲಕ ಸಮರ್ಪಕ ಮಾಹಿತಿಯನ್ನು ದಾಖಲಿಸಬೇಕೆಂದು ಛಲವಾದಿ ಮಹಾಸಭಾ ರಾಜ್ಯ ನಿರ್ದೆಶಕ ಎಂ.ವಸAತ ಮನವಿ ಮಾಡಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಉಪಜಾತಿಗಳ ಆಧಾರದ ಮೇಲೆ ಜಾತಿಗಳ ಗಣತಿ ನಡೆಯುತ್ತಿದ್ದು ಛಲವಾದಿ ಸಮೂದಾಯ ಉಪ ಜಾತಿಗಳು ಮೂಲ ಜಾತಿಯನ್ನು ನಮೂದಿಸಬೇಕು. ಹರಿಜನ ಎಂದು ನಮೂದಿಸಿ ಗೊಂದಲಕ್ಕೆ ಕಾರಣವಾಗಬಾರದು.
ಗಣತಿದಾರರು ಮನೆ ಮನೆಗೆ ಆಗಮಿಸಿದಾಗ ಛಲವಾದಿ,ಬಲಗೈ, ಹೊಲೆಯ ಸಂಬAಽತ ಜಾತಿಗಳಾದ ಬ್ಯಾಗಾರ,ಬೇಗಾರ, ಮಾಲ ಎಂದು ನಮೂದಿಸಬೇಕು. ಕೆಲ ಜಿಲ್ಲೆಗಳ ಶಾಲಾ ದಾಖಲೆಗಳಲ್ಲಿ ಹರಿಜನ ಎಂದು ನಮೂದಾಗಿರುತ್ತದೆ. ಮೂಲ ಜಾತಿ ನಮೂದಿಸಿದರೆ ಗಣತಿಗೆ ಸಹಕಾರವಾಗುತ್ತದೆ. ಅನಗತ್ಯಗೊಂದಲಗಳಿಗೆ ಒಳಗಾಗದೇ ಖಚಿತ ಮಾಹಿತಿ ದಾಖಲಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ವೀರೇಶ ಗಾಣಧಾಳ, ಯಲ್ಲಪ್ಪ.ಬಿ, ವಿಜಯ ಪ್ರಸಾದ, ರಮೇಶ, ಅಂಜನರೆಡ್ಡಿ, ಇದ್ದರು.