

ಲಕ್ಷ್ಮೇಶ್ವರ: ‘ನನ್ನ ಬೆಳೆ ನನ್ನ ಹಕ್ಕು’ ಘೋಷಣೆಯಡಿ ಮುಂಗಾರು ಹಂಗಾಮಿನಲ್ಲಿ ಬೆಳೆ ವಿವರವನ್ನು ಮೊಬೈಲ್ ಆ್ಯಪ್ ಮೂಲಕ ದಾಖಲಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ. ರೈತರು ತಮ್ಮ ಬೆಳೆ ವಿವರವನ್ನು ಆದಷ್ಟು ಬೇಗ ದಾಖಲಿಸಬೇಕು ಎಂದು ಕೃಷಿ ಅಧಿಕಾರಿ ಚಂದ್ರಶೇಖರ ನರಸಮ್ಮನವರ ತಿಳಿಸಿದ್ದಾರೆ.
ಶುಕ್ರವಾರ ರೈತರ ಜಮೀನುಗಳಿಗೆ ತೆರಳಿ ಬೆಳೆ ಸಮೀಕ್ಷೆ ದಾಖಲಿಸುವ ಮಾಹಿತಿ ನೀಡಿ, ರೈತರಿಂದಲೇ ಬೆಳೆ ಸಮೀಕ್ಷೆ ಮಾಡುವ ಕಾರ್ಯ ಉಪಯುಕ್ತವಾಗಿದೆ. ಇದರಿಂದ ತಪ್ಪು ಮಾಹಿತಿ ದಾಖಲೆಯಾಗುವುದು ತಪ್ಪಲಿದೆ. ರೈತರೇ ತಮ್ಮ ಮೊಬೈಲ್ ಆ್ಯಪ್ ಮೂಲಕ ಸಕಾಲಿಕವಾಗಿ ತಮ್ಮ ಬೆಳೆಗಳ ವಿವರ ದಾಖಲಿಸುವ ವ್ಯವಸ್ಥೆ ಮಾಡುವುದರಿಂದ ಪಹಣಿಯಲ್ಲಿ ಸರಿಯಾದ ಬೆಳೆ ವಿವರ ದಾಖಲಾಗುತ್ತದೆ. ಬೆಳೆವಿಮೆ, ಬೆಳೆಹಾನಿ ಪರಿಹಾರ, ಬೆಳೆಸಾಲ, ಸಹಾಯಧನ ಸೇರಿ ಸರ್ಕಾರದಿಂದ ರೈತರಿಗೆ ಸಿಗುವ ಸೌಲಭ್ಯದಿಂದ ವಂಚಿತರಾಗುವುದಿಲ್ಲ. ಆದ್ದರಿಂದ ಮೊಬೈಲ್ ಮೂಲಕ ಬೆಳೆ ದೃಢೀಕರಣ ಮಾಡಿಕೊಳ್ಳಬೇಕು. ಜು.31ರ ವರೆಗೆ ಬೆಳೆವಿಮೆ ಪಾವತಿಗೆ ಕಾಲಾವಕಾಶವಿದೆ ಎಂದು ಹೇಳಿದರು.
ರೈತರು ಗೂಗಲ್ ಪ್ಲೇಸ್ಟೋರ್‌ನಿಂದ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಬೆಳೆ ವಿವರ ದಾಖಲಿಸಬೇಕಾಗಿದೆ. ಕೃಷಿ ಸಹಾಯಕ ಅಧಿಕಾರಿ ಪಿ.ಕೆ. ಹೊನ್ನಪ್ಪನವರ, ಇದ್ದರು.