ಸಮೀಕ್ಷೆಯಲ್ಲಿ ನೊಳಂಬ ಎಂದೇ ನಮೂದಿಸಿ

20 gubbi 02 nalanda
Published on

 ಗುಬ್ಬಿ: ರಾಜ್ಯದಲ್ಲಿ ಸುವಾರು 20 ಲಕ್ಷ ಹಾಗೂ ಜಿಲ್ಲೆಯಲ್ಲಿ ಮೂರು ಲಕ್ಷ ನೊಳಂಬ ಲಿಂಗಾಯಿತರಿದ್ದಾರೆ ಎಂದು ರಾಜ್ಯ ನೊಳಂಬ ಲಿಂಗಾಯತ ಸಂದ ಅಧ್ಯಕ್ಷ ಚಂದ್ರಶೇಖರ್ ತಿಳಿಸಿದರು.

ತಾಲೂಕಿನ ಹೇರೂರು ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಜಾತಿ ಗಣತಿಯ ಕರಪತ್ರ ಬಿಡುಗಡೆ ವಾಡಿ ವಾತನಾಡಿ, ಕರ್ನಾಟಕ ಸರ್ಕಾರ ಸೆ.22ರಿಂದ ಸಾವಾಜಿಕ ಮತ್ತು ಶೈಕ್ಷಣಿಕ ಜಾತಿಗಣತಿಯನ್ನ ನಡೆಸುತ್ತಿದ್ದು, ಜಾತಿಗಣತಿಯಲ್ಲಿ ನೊಳಂಬ ಲಿಂಗಾಯಿತರು ಸರಿಯಾಗಿ ಜಾತಿ ಕಾಲಂನಲ್ಲಿ ಎ 832 ಉಪಜಾತಿ ಕಾಲಂನಲ್ಲಿ ಎ 1083 ನೊಳಂಬ ಲಿಂಗಾಯತ ಎಂದು ನಮೂದಿಸಬೇಕು ಎಂದು ತಿಳಿಸಿದರು.

ಮುಖಂಡ ಎನ್.ಸಿ.ನಂಜಪ್ಪ ವಾತನಾಡಿ, ಗುಬ್ಬಿ ತಾಲೂಕಿನಲ್ಲಿ ಸುವಾರು 65 ರಿಂದ 70 ಸಾವಿರ ನೊಳಂಬ ಸಮುದಾಯದವಿದ್ದು, ಜಾತಿಗಣತಿಯಲ್ಲಿ ಪ್ರತಿಯೊಬ್ಬರು ಭಾಗಿಯಾಗಿ ಸರಿಯಾದ ರೀತಿಯಲ್ಲಿ ತಮ್ಮ ಜಾತಿ ಹಾಗೂ ಉಪಜಾತಿಯನ್ನು ನಮೂದಿಸಬೇಕು ಎಂದು ಮನವಿ ವಾಡಿದರು.

ಉಪಸಮಿತಿಯ ತೋಂಟರಾಧ್ಯ, ಮುಖಂಡರಾದ ಗಂಗಾಧರಯ್ಯ, ಬೆಟ್ಟದಲ್ಲಿ ವಿಎಸ್‌ಎಸ್‌ಎನ್ ವಾಜಿ ಅಧ್ಯಕ್ಷ ನಂಜುಂಡಯ್ಯ, ಸಿದ್ದರಾಮಯ್ಯ, ಜಗದೀಶ್, ಸಿದ್ದರಾಮಣ್ಣ, ಕುವಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net