ಸಮೀಕ್ಷೆ ಗಣತಿಯಲ್ಲಿ ಮಾದಿಗ ಎಂದು ನಮೂದು ಮಾಡಿ

NARASAPPA DANDORA
NARASAPPA DANDORA
Published on

 ರಾಯಚೂರು ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವರ್ಗೀಕರಣಕ್ಕೆ ನ್ಯಾಯಮೂರ್ತಿ ನಾಗಮೋಹನ ದಾಸ್ ನೇತೃತ್ವದಲ್ಲಿ ಏ.೬ ರಿಂದ ಪರಿಶಿಷ್ಟ ಜಾತಿಗಳ ಸಮೀಕ್ಷೆ ನಡೆಯಲಿದ್ದು ನಮ್ಮ ಸಮೂದಾಯ ಜನರು ಗಣತಿಯಲ್ಲಿ ಮಾದಿಗ ಎಂದು ನಮೂದಿಸಬೇಕೆಂದು ಮಾದಿಗ ದಂಡರೋ ಮೀಸಲಾತಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ನರಸಪ್ಪ ದಂಡೋರ ಮನವಿ ಮಾಡಿದರು.

ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಮೂವತ್ತು ವರ್ಷಗಳಿಂದ ಒಳಮೀಸಲಾತಿ ಜಾರಿಗೆ ನಿರಂತರ ಹೋರಾಟ ನಡೆಸಿದ -Àಲವಾಗಿ ರಾಜ್ಯ ಸರ್ಕಾರ ಏಕಸದಸ್ಯ ಆಯೋಗ ರಚನೆ ಮಾಡಿತ್ತು. ಆಯೋಗ ಮಧ್ಯಂತರ ವರದಿಯನ್ನು ನೀಡಿದ್ದರಿಂದ ಇನ್ನೇರಡು ತಿಂಗಳ ಕಾಲ ವಿಸ್ತರಿಸಿ ಗಣತಿ ನಡೆಸಲು ಅವಕಾಶ ನೀಡಿದೆ.

ಗಣತಿದಾರರು ಮನೆ ಮನೆಗೆ ಬಂದಾಗ ಬೇರೆ ಜಾತಿಯನ್ನು ನಮೂದಿಸದೇ ಮಾದಿಗ ಎಂದು ನಮೂದಿಸಿದರೆ ಸಮಾಜ ಅಽಕೃತ ಜನಸಂಖ್ಯೆ ತಿಳಿಯಲುಸಾಧ್ಯವಾಗುತ್ತದೆ. ಆದಿ ಕರ್ನಾಟಕ,ಆದಿ ದ್ರಾವಿಡ ಸೇರಿದಂತೆ ಇರುವ ಗೊಂದಲಗಳಿAದ ಹೊರಬಂದು ಮಾದಿಗ ಎಂದು ನಮೂದಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಯುವಸೇನೆ ಅಧ್ಯಕ್ಷ ರಂಜಿತ ದಂಡೋರ, ದುಳ್ಳಯ್ಯ ಗುಂಜಹಳ್ಳಿ, ಗೋವಿಂದ ಈಟೇಕರ್, ಜಕ್ರಪ್ಪ ಹಂಚಿನಾಳ, ಹನುಮಂತ ಜುಲುಂಗೇರಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net