ಉಪಜಾತಿ ಕಲಂನಲ್ಲಿ ಕುಂಚಿಟಿಗ ಎಂದೇ ನಮೂದಿಸಿ

FotoJet 23 25
Published on

ಸ್ಫಟಿಕಪುರಿ ಸಂಸ್ಥಾನಮಠದ ಶ್ರೀ ನಂಜಾವಧೂತ ಸ್ವಾಮೀಜಿ ಹೇಳಿಕೆ

ಶಿರಾ:ಸರ್ಕಾರ ಕೈಗೊಂಡಿರುವ ಸಾವಾಜಿಕ, ಆರ್ಥಿಕ, ಶೈಕ್ಷಣಿಕ ಜಾತಿ, ಜನಗಣತಿ ವಿಚಾರವಾಗಿ ಕುಂಚಿಟಿಗರಲ್ಲಿ ಗೊಂದಲ ಮೂಡಿಸುವ ಕೆಲಸ ವಾಡಲಾಗುತ್ತಿದೆ. ಇದನ್ನು ಪ್ರಜ್ಞಾವಂತರು ಅರ್ಥ ವಾಡಿಕೊಳ್ಳಬೇಕು. ಕುಂಚಿಟಿಗರು ಜಾತಿ ಕಲಂನಲ್ಲಿ ಒಕ್ಕಲಿಗ ಎಂದು, ಉಪಜಾತಿ ಕಲಂನಲ್ಲಿ ಕುಂಚಿಟಿಗ ಎಂದು ನಮೂದಿಸಬೇಕೆಂದು ಸ್ಫಟಿಕಪುರಿ ಸಂಸ್ಥಾನಮಠದ ಪೀಠಾಧ್ಯಕ್ಷ ನಂಜಾವಧೂತ ಸ್ವಾಮೀಜಿ ಹೇಳಿದರು.

ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿ ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಾವಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಜಾಗೃತಿ ಸಭೆಯಲ್ಲಿ ವಾತನಾಡಿ, ನಮಗೆ ಯಾರು ಬೆದರಿಸಿ ಹೆದರಿಸಿ ಒಕ್ಕಲಿಗ ಎನ್ನುವಂತೆ ಹೇಳಿಲ್ಲ. ನಾವು ಮೂಲದಲ್ಲಿ ಕುಂಚ ಒಕ್ಕಲಿಗರಾಗಿದ್ದು, ನೇಗಿಲು ಹಿಡಿದು ದುಡಿಯುವ ಕಾರಣ ಒಕ್ಕಲಿಗರಾಗಿದ್ದೇವೆ. ಇದನ್ನು ಮರೆವಾಚಿ ನಾವು ಸ್ವತಂತ್ರ ಅಸ್ತಿತ್ವ ಹೊಂದಿರುವ ಜಾತಿ ಎಂದು ಪ್ರಚಾರ ವಾಡುತ್ತಾರೆ. ಅದರೆ ಒಕ್ಕಲಿಗ ಜಾತಿಯ ಉಪ ಜಾತಿಯಾಗಿ ಕುಂಚಿಟಿಗ ಇದೆ ಇದನ್ನು ಅರಿಯಬೇಕಿದೆ ಎಂದರು.

ಶಾಸಕ ಟಿ.ಬಿ.ಜಯಚಂದ್ರ ಮಾತನಾಡಿ, ನಾವು ರಾಜಕೀಯವಾಗಿ ಪ್ರಬಲರಾಗಬೇಕಾದರೆ ಇಚ್ಛಾಶಕ್ತಿ ಪ್ರದರ್ಶನ ವಾಡಬೇಕಿದೆ. ನಮ್ಮತನವನ್ನು ಕಳೆದುಕೊಳ್ಳದೆ ನಾವು ಉಳಿಯಬೇಕಿದೆ ಜಾತಿ ಮತ್ತು ನೀರಾವರಿ ಹೋರಾಟದಲ್ಲಿ ನಾನು ಎಂದು ಸೋತಿಲ್ಲ ಎಂದರು.

ವಿಧಾನ ಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಮಾತನಾಡಿ, ರಾಜ್ಯದಲ್ಲಿ ಒಕ್ಕಲಿಗ ಸಮುದಾಯ ಬಲಿಷ್ಠವಾಗಬೇಕೆಂದರೆ ಒಕ್ಕಲಿಗ ಜಾತಿ ಎಂದೇ ನಮೂದಿಸಬೇಕು ಎಂದರು.

ವಾಜಿ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ, ಜೆಡಿಎಸ್ ಮುಖಂಡ ಆರ್.ಉಗ್ರೇಶ್, ಜಿಪಂ ವಾಜಿ ಸದಸ್ಯ ಎಸ್.ರಾಮಕೃಷ್ಣ, ಜೆಡಿಎಸ್ ಮುಖಂಡ ಯಶೋಧರ, ಶಿವಪ್ರಸಾದ್, ಕುಂಚಿಟಿಗರ ಸಂದ ನಿರ್ದೇಶಕರಾದ ಹಾಲಗುಂಡೆಗೌಡ, ರಾಧಕೃಷ್ಣ, ಬೊಪ್ಪಣ್ಣ, ಸತ್ಯನಾರಾಯಣ, ಡಿ.ಸಿ.ಅಶೋಕ್, ನಗರಸಭೆ ಸದಸ್ಯ ಉವಾ ವಿಜಯರಾಜು, ಹುಲಿಕುಂಟೆ ಗ್ರಾಪಂ ಅಧ್ಯಕ್ಷ ರವಿಕುವಾರ್, ಕಳ್ಳಂಬೆಳ್ಳ ಗ್ರಾಪಂ ಅಧ್ಯಕ್ಷ ಅಭಿಷೇಕ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net