ಧರ್ಮದ ಕಾಲಂನಲ್ಲಿ ಬೌದ್ಧ ಎಂದೇ ನಮೂದಿಸಿ

25 09 205_BNG_RURAL_PAGE_2
ಆನೇಕಲ್​ನಲ್ಲಿ ಅಖಿಲ ಕರ್ನಾಟಕ ಬೌದ್ಧ ದಾಖಲಾತಿ ಆಂದೋಲನ ಸಮಿತಿಯಿಂದ ಜಾತಿ ಮತ್ತು ಅಸ್ಪೃಶ್ಯತೆ ಮುಕ್ತ ಪ್ರಬುದ್ಧ ಭಾರತ ನಿರ್ಮಾಣಕ್ಕಾಗಿ ಬೌದ್ಧ ದಾಖಲಾತಿ ಆಂದೋಲನದ ಜಾಗೃತಿ ಕಾರ್ಯಕ್ರಮ ನಡೆಯಿತು. ವಕೀಲರಾದ ಪುರುಷೋತ್ತಮ್​, ಆನಂದ್​ ಚಕ್ರವರ್ತಿ, ಮುಖಂಡರಾದ ರಾವಣ, ಸುರೇಶ್​ ಪೋತಾ, ಮುನಿಯಪ್ಪ ಇದ್ದರು.
Published on

ಆನೇಕಲ್​ : ಪಟ್ಟಣದಲ್ಲಿ ಅಖಿಲ ಕರ್ನಾಟಕ ಬೌದ್ಧ ದಾಖಲಾತಿ ಆಂದೋಲನ ಸಮಿತಿ ವತಿಯಿಂದ ಜಾತಿ ಮತ್ತು ಅಸ್ಪೃಶ್ಯತೆ ಮುಕ್ತ ಪ್ರಬುದ್ಧ ಭಾರತ ನಿರ್ಮಾಣಕ್ಕಾಗಿ ಬೌದ್ಧ ದಾಖಲಾತಿ ಆಂದೋಲನದ ಜಾಗೃತಿ ನಡೆಯಿತು. ಜಾತಿ ಗಣತಿಯಲ್ಲಿ ಬುದ್ಧ ಮತ್ತು ಅಂಬೇಡ್ಕರ್​ ಅನುಯಾಯಿಯಾಗಳು ಕಡ್ಡಾಯವಾಗಿ ಧರ್ಮದ ಕಾಲಂನಲ್ಲಿ ಬೌದ್ಧ ಎಂದು ನಮೂದಿಸಬೇಕು ಎಂದು ತಿಳಿಸಲಾಯಿತು. ದಲಿತ ಪರ ಸಂಟನೆ ಮುಖ್ಯಸ್ಥ ಬಿ.ಗೋಪಾಲ್​ ಮಾತನಾಡಿ, ರಾಜ್ಯಾದಲ್ಲಿರುವ ಬುದ್ಧನ ಅನುಯಾಯಿಗಳು ಮತ್ತು ಬೌದ್ಧ ಧರ್ಮ ಅನುಯಾಯಿಗಳು ಬೌದ್ಧ ಧರ್ಮ ಎಂದು ಬರೆಸಬೇಕು. ಬಸವಣ್ಣನವರಿಗೆ ಬುದ್ಧನೇ ಪ್ರೇರಣೆಯಾಗಿದ್ದಾರೆ. ಬುದ್ಧ, ಅಂಬೇಡ್ಕರ್​ ಅನುಯಾಯಿಗಳು ಧರ್ಮದ ಕಾಲಂನಲ್ಲಿ ಬೌದ್ಧ ಎಂದು ದಾಖಲಿಸಬೇಕು ಎಂದರು.

ಬೌದ್ಧ ದಾಖಲಾತಿ ಆಂದೋಲನ ಸಮಿತಿಯ ಡಾ.ಮೀನಾ ಮಾತನಾಡಿ, ಯಾವುದೇ ಧರ್ಮವನ್ನು ವಿರೋಧ ಮಾಡುವ ಅವಶ್ಯಕತೆಯಿಲ್ಲ. ದಲಿತರು, ಹಿಂದುಳಿದವರು ಜಾತಿಗಣತಿಯಲ್ಲಿ ಧರ್ಮದ ಕಾಲಂನಲ್ಲಿ ಬೌದ್ಧ ಧರ್ಮ ಎಂದು ನಮೂದಿಸಬೇಕು. ಅಂಬೇಡ್ಕರ್​ ಅವರು ಬೌದ್ಧ ಧರ್ಮ ಎಂದು ಬದಲಾಯಿಸುವುದರಿಂದ ದಲಿತರಿಗೆ ದೊರೆಯುವ ಮೀಸಲಾತಿಯಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ ಎಂದು ಹೇಳಿದ್ದಾರೆ. ಬೌದ್ಧ ಧರ್ಮ ಶಾಂತಿ, ಪ್ರೀತಿಯನ್ನು ಸಾರುವ ಧರ್ಮವಾಗಿದೆ. ಜಾತಿಯ ಕಾಲಂನಲ್ಲಿ ನಿಮ್ಮ ಜಾತಿಯನ್ನು ನಮೂದಿಸಿ ಆದರೆ ಧರ್ಮದ ಕಾಲಂನಲ್ಲಿ ಕಡ್ಡಾಯವಾಗಿ ಬೌದ್ಧ ಎಂದು ನಮೂದಿಸಿದೆ. ಇದರಿಂದಾಗಿ ಬೌದ್ಧ ಧರ್ಮ ರಾಜ್ಯದಲ್ಲಿ ಮತ್ತಷ್ಟು ಪ್ರಬಲವಾಗುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net