ಜನಗಣತಿ ಸಮೀಕ್ಷೆ ವೇಳೆ "ಭೋವಿ ವಡ್ಡರ್​' ನಮೂದಿಸಿ:ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಕರೆ

bhovi
Published on

ಬೆಂಗಳೂರು: ಒಳ ಮೀಸಲಾತಿ ಸಂಬಂಧಪಟ್ಟಂತೆ ಜಾತಿ ಜನಗಣತಿ ಸಮೀಕ್ಷೆ ನಡೆಸುವ ಸಂದರ್ಭದಲ್ಲಿ ನಮ್ಮ ಜನಾಂಗದವರು "ಭೋವಿ ವಡ್ಡರ್​' ಎಂದು ಕಡ್ಡಾಯವಾಗಿ ನಮೂದಿಸಬೇಕೆಂದು ಚಿತ್ರದುರ್ಗ ಭೋವಿ ಗುರುಪೀಠಾಧ್ಯ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಸಮುದಾಯದ ಜನರಿಗೆ ಕರೆ ಕೊಟ್ಟಿದ್ದಾರೆ.

ಅಂತರಾಷ್ಟ್ರೀಯ ಭಾರತೀಯ ಭೋವಿ(ವಡ್ಡರ) ಸಮಾಜ ಭಾನುವಾರ ನಗರದಲ್ಲಿ ಹಮ್ಮಿಕೊಂಡಿದ್ದ "ಭೋವಿ(ವಡ್ಡರ) ಮುಖಂಡರಗಳ ಜಾಗೃತಿ ಸಭೆ' ಕಾರ್ಯಕ್ರಮದಲ್ಲಿ ಶ್ರೀಗಳು ಮಾತನಾಡಿದರು. ಮನೆ ಮನೆಗೆ ಗಣತಿದಾರರು ಬಂದು ಸಮೀಕ್ಷೆ ಸಮಯದಲ್ಲಿ "ಭೋವಿ ವಡ್ಡರ್​' ಎಂದು ಹೇಳಬೇಕು. ಸರ್ಕಾರವೇ ಶೇ.12 ಮೀಸಲಿಟ್ಟಿದ್ದು, ಅದರಲ್ಲಿ ಶೇ.3 ಮಾತ್ರ ಖರ್ಚಾಗಿದೆ ಎಂದು ಹೇಳಿದೆ. ನಮ್ಮ ಜನಾಂಗದಲ್ಲಿ ಕೀಳರಿಮೆಯಿದೆ. ಅದನ್ನು ತೊಡೆದು ಹಾಕಿ ಕಡ್ಡಾಯವಾಗಿ ಜಾತಿ ನಮೂದಿಸಿದರೆ ಸಮಾಜವನ್ನು ಸರ್ಕಾರ ಗುರುತಿಸಲಿದೆ ಎಂದರು.

ಸಚಿವ ಶಿವರಾಜ್​.ಎಸ್​.ತಂಗಡಗಿ ಮಾತನಾಡಿ, ಅರ ವಂಚಿತ ಭೋವಿ ಜನಾಂಗಕ್ಕೆ "ಭೋವಿ' ಎಂದು ಬರೆಸಲು ಪ್ರತಿ ಗ್ರಾಮ, ಪಟ್ಟಣಗಳಿಗೆ ವಿದ್ಯಾವಂತರು,ಮುಖಂಡರು ತೆರಳಿ ಮಾರ್ಗದರ್ಶನ ನೀಡಬೇಕು. ಇಲ್ಲದಿದದ್ದರೆ ಈ ಸಮಾಜ ಮೂಲೆ ಗುಂಪಾಗಲಿದೆ ಎಂದರು.

ಮಾಜಿ ಸಚಿವ ಅರವಿಂದ ಲಿಂಬಾವಳಿ ಮಾತನಾಡಿ, ನಗರ ಪ್ರದೇಶಗಳಲ್ಲಿ ವಾಸಿಸುವರು, ತಮ್ಮ ಜನಾಂಗದ ಹೆಸರು ಹೇಳಲು ಹಿಂಜರಿಕೆ ಬಿಡಬೇಕು. ಸಮಾಜದ ಉಳುವಿಗೆ, ಭವಿಷ್ಯಕ್ಕಾಗಿ ಭೋವಿ ಎಂದೇ ನಮೂದಿಸಬೇಕು ಎಂದು ಹೇಳಿದರು.ಭೋವಿ ಅಭಿವೃದ್ದಿ ನಿಗಮದ ಅಧ್ಯ ರವಿಕುಮಾರ್​, ಸಮಾಜದ ಅಧ್ಯ ರವಿಮಾಕಳಿ, ರಾಜ್ಯ ಭೋವಿ ಅಭಿವೃದ್ದಿ ನಿಗಮದ ಮಾಜಿ ಅಧ್ಯ ಜಿ.ವಿ. ಸೀತರಾಮು, ಮಾಜಿ ಶಾಸಕ ಎಂ.ವಿ.ನಾಗರಾಜು, ನಿವೃತ್ತ ನ್ಯಾಯಾದೀಶ ವೆಂಕಟೇಶ್​ ವೋರ್ಸೆ ಮತ್ತಿತರರಿದ್ದರು.

ಸಾಮಾಜಿಕ ನ್ಯಾಯ, ಶಿಣ, ಆರ್ಥಿಕ ಮತ್ತು ರಾಜಕೀಯ ಮೀಸಲಾತಿ ಸಿಗಬೇಕಾದರೆ ಭೋವಿ ಜನಾಂಗದವರು ಗುಂಪು, ರಾಜಕೀಯ ಬದಿಗೊತ್ತಿ ಒಂದಾಗಬೇಕು. ಸಮೀೆ ವೇಳೆ "ಭೋವಿ'ಎಂದು ನಮೂದಿಸಲು ಅವಿದ್ಯಾವಂತರ ಮನವೊಲಿಸುವ ಅಗತ್ಯವಿದೆ.

| ಮಲ್ಲೇಶ್​​ಬಾಬು, ಸಂಸದ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net