ಜಾತಿ ಗಣತಿಯಲ್ಲಿ ರೆಡ್ಡಿ ಎಂದೇ ನಮೂದಿಸಿ

FotoJet
Published on

ಜನ ಸಂಘದ ಸಂಘಟನಾ ಅಧ್ಯಕ್ಷ ಎಂ.ಸಿ.ಪ್ರಭಾಕರ ರೆಡ್ಡಿ ಸಲಹೆ

ಕೋಲಾರ: ರಾಜ್ಯದಲ್ಲಿ ನಡೆಯುವ ಜಾತಿ ಗಣತಿ ಸಂದರ್ಭದಲ್ಲಿ ರೆಡ್ಡಿ ಸಮುದಾಯದಲ್ಲಿನ ಉಪ ಜಾತಿ ಕೈ ಬಿಟ್ಟು 1105 ರೆಡ್ಡಿ ಅಡಿಯಲ್ಲಿ ಸೇರ್ಪಡೆ ಮಾಡಬೇಕು ಎಂದು ಕರ್ನಾಟಕ ರೆಡ್ಡಿ ಜನ ಸಂಘದ ಸಂಘಟನಾ ಅಧ್ಯಕ್ಷ ಎಂ.ಸಿ.ಪ್ರಭಾಕರ ರೆಡ್ಡಿ ಹೇಳಿದರು.

ನಗರದ ಪತ್ರಕರ್ತರ ಭವನದಲ್ಲಿನ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಹಿಂದುಳಿದ ಆಯೋಗದಿಂದ ನಡೆಸಿದ ಜಾತಿ ಸಮೀಾ ವರದಿಯ ಮೀಸಲಾತಿ ಪ್ರಕಟಣೆಯು ರೆಡ್ಡಿ ಸಮುದಾಯದವರಿಗೆ ಅಸಮಾಧಾನ ತಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಆಯೋಗವು ಜಾತಿ ಗಣತಿಯೊಂದಿಗೆ ಸಾಮಾಜಿಕ, ಶೈಕ್ಷಣಿಕವಾಗಿ ಸಮೀಕ್ಷೆ ಕೈಗೊಳ್ಳಬೇಕೆಂದು ಆದೇಶಿಸಿದೆ. ಎಲ್ಲ ಕುಟುಂಬಗಳ ಸಮಗ್ರ ಸಮೀಕ್ಷೆ ನಡೆಸಲು ಉದ್ದೇಶಿಸಿದ್ದು, 6 ವರ್ಷ ಮೇಲ್ಪಟ್ಟ ಎಲ್ಲರ ಆಧಾರ್​ ಸಂಖ್ಯೆ ಪಡೆಯುವುದನ್ನು ಕಡ್ಡಾಯಗೊಳಿಸಿದೆ ಎಂದರು.

ರಾಜ್ಯದಲ್ಲಿ ರೆಡ್ಡಿ ಸಮುದಾಯದಲ್ಲಿ ಕೇವಲ ಮೂರು ಪಂಗಡಗಳಿವೆ. ಉಪ ಪಂಗಡಗಳನ್ನು ಸೇರ್ಪಡೆ ಮಾಡುವ ಮೂಲಕ ಗೊಂದಲಕ್ಕೆ ಒಳಪಡಿಸಿ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ, ಎಲ್ಲರೂ ಉಪ ಪಂಗಡ ಬಿಟ್ಟು ರೆಡ್ಡಿ ಎಂದು ಮಾತ್ರ ಸಮೀಕ್ಷೆಗೆ ಸೇರ್ಪಡ ಮಾಡಬೇಕು ಎಂದು ಸಲಹೆ ನೀಡಿದರು.

ಕಳೆದ 1956ರಿಂದ ರೆಡ್ಡಿ, ರಡ್ಡಿ, ರೆಡ್ಡಿ ಒಕ್ಕಲಿಗ ಎಂಬ ಮೂರು ವರ್ಗಗಳನ್ನು ಗೆಜೆಟ್​ನಲ್ಲಿ ಸೇರ್ಪಡೆ ಮಾಡಲಾಗಿದೆ. ಕೇಂದ್ರ ಸರ್ಕಾರದ ಸಮೀಕ್ಷೆಯಲ್ಲಿ ಇದನ್ನು ಕೈ ಬಿಡಲಾಗಿದೆ. ಇದರಿಂದ ಸರ್ಕಾರದಿಂದ ಸಮುದಾಯದವರಿಗೆ ಸಿಗುವ ಎಲ್ಲಾ ಸೌಲಭ್ಯಗಳು ವಂಚಿತರಾಗಿ ಸಮಾಜಕವಾಗಿ ಶೈಕ್ಷಣಿಕವಾಗಿ ಅಧಿಕಾರ, ಉದ್ಯೋಗ ಸೇರಿದಂತೆ ಎಲ್ಲ ರೀತಿಯೂ ವಂಚಿರರಾಗಲು ಕಾರಣವಾಗಿದೆ ಎಂದು ದೂರಿದರು.

ಜಿಲ್ಲಾ ಕೇಂದ್ರದಲ್ಲಿಲ್ಲ ಕೆ.ಸಿ.ರೆಡ್ಡಿ ಪುತ್ಥಳಿ: ರಾಜ್ಯದ ಪ್ರಥಮ ಮುಖ್ಯ ಮಂತ್ರಿ ಹಾಗೂ ಸ್ವಾತಂತ್ರ ಹೋರಾಟಗಾರರಾದ ಕೆ.ಸಿ.ರೆಡ್ಡಿ ಅವರ ಪುತ್ಥಳಿಕೆಯನ್ನು ಜಿಲ್ಲಾ ಕೇಂದ್ರದಲ್ಲಿ ಅನಾವರಣ ಮಾಡಬೇಕು. ಮುಂದಿನ ಪೀಳಿಗೆಗೆ ರೆಡ್ಡಿ ಅವರ ಸಾಧನೆಯ ಅರಿವು ಮೂಡಿಸಲು ಪೂರಕ ಕಾರ್ಯಕ್ರಮ ರೂಪಿಸಲು ಮುಂದಾಗಬೇಕು. ಮಾಜಿ ಸಚಿವ ಕೆ.ಶ್ರೀನಿವಾಸಗೌಡ ಕೆ.ಸಿ. ರೆಡ್ಡಿ ಪುತ್ಥಳಿಕೆಯನ್ನು 12 ಲಕ್ಷ ರೂ. ವೆಚ್ಚದಲ್ಲಿ ಸಿದ್ಧಪಡೆಸಿದ್ದಾರೆ, ಆನಂತರ ಅಧಿಕಾರಕ್ಕೆ ಬಂದ ಜನಪ್ರತಿನಿಧಿಗಳು ಸ್ಥಾಪನೆ ಮಾಡುವಲ್ಲಿ ವಿಲರಾಗಿದ್ದಾರೆ ಎಂದು ಎಂ.ಸಿ.ಪ್ರಭಾಕರ ರೆಡಿ ಕಿಡಿಕಾರಿದರು.

ಸಂದ ರಾಜ್ಯ ನಿರ್ದೇಶಕ ರವೀಂದ್ರ ರೆಡ್ಡಿ, ಮುಖಂಡರಾದ ಶಾಂತರಾಜು. ಸುರೇಶ್​, ವೇಮಣ್ಣ, ವಿಶ್ವನಾಥ್​ ರೆಡ್ಡಿ, ಪ್ರಸಾದರೆಡ್ಡಿ, ಸುಬ್ಬಾರೆಡ್ಡಿ, ರಾಮಚಂದ್ರರೆಡ್ಡಿ, ಅನಿಲ್​ ರೆಡ್ಡಿ, ಆನಂದ ರೆಡ್ಡಿ, ನಾಗರೆಡ್ಡಿ, ರಾಧಾಕೃಷ್ಣರೆಡ್ಡಿ, ಶ್ರೀರಾಮರೆಡ್ಡಿ, ಬಾಬುರೆಡ್ಡಿ, ಪ್ರಸಾದ್​ ರೆಡ್ಡಿ, ಗೋಪಿ, ಸಂಪಂಗಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net