ಜಾತಿ ಜನಗಣತಿಯಲ್ಲಿ ಕಮ್ಮ ಎಂದೇ ನಮೂದಿಸಿ

19 09 2025_BGR_RURAL_PAGE_5A
ಹೊಸಕೋಟೆಯಲ್ಲಿ ಕಮ್ಮವಾರಿ ಸಂದಿಂದ ಆಯೋಜಿಸಿದ್ದ ಜಾತಿಜನಗಣತಿ ಜಾಗೃತಿ ಮತ್ತು ಕಮ್ಮ ಏಳಿಗೆ ಸಮಾಲೋಚನಾ ಸಭೆಯನ್ನು ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಉದ್ಘಾಟಿಸಿದರು. ಕೆಐಎಡಿಬಿ ವಿಶೇಷ ಜಿಲ್ಲಾಧಿಕಾರಿ ರುನಂದನ್​, ಬೆಂಗಳೂರು ಕಮ್ಮವಾರಿ ಸಂದ ಅಧ್ಯಕ್ಷ ರಾಜ್​ಗೋಪಾಲ್​ ನಾಯ್ಡು, ಖಜಾಂಚಿ ನೀಲಾಜಾಕ್ಷ ನಾಯ್ಡು ಇದ್ದರು.
Published on

ಹೊಸಕೋಟೆ : ಕಮ್ಮ ಸಮುದಾಯದವರು ಸೆ.22ರಿಂದ ನಡೆಯಲಿರುವ ಜಾತಿ ಜನಗಣತಿ ಸಮೀೆಯಲ್ಲಿ ಜಾತಿ ಹಾಗೂ ಉಪಜಾತಿ ಎರಡರಲ್ಲೂ ಕಮ್ಮ ಎಂದೇ ನಮೂದಿಸಿ ಎಂದು ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ತಿಳಿಸಿದರು. ನಗರದ ಖಾಸಗಿ ಸಭಾಭವನದಲ್ಲಿ ಕಮ್ಮವಾರಿ ಸಂದಿಂದ ಆಯೋಜಿಸಿದ್ದ ಹೊಸಕೋಟೆ ತಾಲೂಕು ಕಮ್ಮ ಜನಾಂಗದ ಸಮಾಲೋಚನ ಸಭೆಯಲ್ಲಿ ಮಾತನಾಡಿದರು.

ಕಮ್ಮ ಸಮುದಾಯ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಸಮಾಜದ ಮುಖ್ಯವಾಹಿನಿಗೆ ಬರುವ ಉದ್ದೇಶದಿಂದ ಸರ್ಕಾರದ ಮಟ್ಟದಲ್ಲಿ ಸಮುದಾಯದ ಸಂಖ್ಯಾಬಲ ಪ್ರದರ್ಶಿಸಲು ಉಪಜಾತಿಗಳನ್ನು ಬಿಟ್ಟು ಕಮ್ಮ ಎಂದು ನಮೂದಿಸಬೇಕು. ಉಪಜಾತಿಗಳನ್ನು ನಮೂದು ಮಾಡಿದರೆ ಸಮುದಾಯದ ಬಲ ಮತ್ತಷ್ಟು ಕುಗ್ಗುತ್ತದೆ. ಆದ್ದರಿಂದ ಮಹಿಳೆಯರು ಬಾಗಿಲಿಗೆ ಗಣತಿದಾರರು ಬಂದಾಗ ಜಾಗರೂಕರಾಗಿ ಜಾತಿ ಹಾಗೂ ಉಪಜಾತಿ ಕಾಲಂನಲ್ಲಿ ಕಮ್ಮ ಎಂದು ನಮೂದಿಸಿ. ಇದರಿಂದ ಜನಾಂಗದ ಅಭಿವೃದ್ಧಿ ಜತೆಗೆ ಎಲ್ಲೂ ಒಡಕು ಉಂಟಾಗುವುದಿಲ್ಲ ಎಂದರು.

ಯೋಜನಾಪ್ರಾಧಿಕಾರ ಅಧ್ಯಕ್ಷ ಕೇಶವಮೂರ್ತಿ ಮಾತನಾಡಿ, ರಾಜ್ಯದಲ್ಲಿ ಕಮ್ಮ ಸಮುದಾಯ ಕೇವಲ 1.17 ಲಕ್ಷ ಇದೆ ಎಂದು ಸರ್ಕಾರ ತೋರಿಸಿದೆ. ಆದರೆ ರಾಜ್ಯದಲ್ಲಿ 15 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇದೆ ಎಂದು ಅಂದಾಜಿಸಲಾಗಿದ್ದು, ಅದನ್ನು ಸರ್ಕಾರಕ್ಕೆ ತೋರಿಸುವುದೇ ನಮ್ಮ ಉದ್ದೇಶವಾಗಿದೆ. ಪ್ರಮುಖವಾಗಿ ಕಮ್ಮ ನಾಯ್ಡು, ಕಮ್ಮ ಚೌದರಿ, ಕಮ್ಮ ರೆಡ್ಡಿ ಎಂದು ಉಪಜಾತಿಗಳಾಗಿ ವಿಂಗಡಿಸಿ ಸಂಖ್ಯೆ ಕಡಿಮೆ ತೋರಿಸಲಾಗುತ್ತಿದೆ. ಆದ್ದರಿಂದ ಈ ಬಾರಿ ಜಾತಿ ಹಾಗೂ ಉಪಜಾತಿ ಎರಡರಲ್ಲೂ ಕಮ್ಮ ಎಂದು ನಮೂದಿಸಲು ರಾಜ್ಯದ ಜಿಲ್ಲೆ ತಾಲೂಕು ಕೇಂದ್ರಗಳಲ್ಲಿ ಸಮಾಲೋಚನಾ ಸಭೆ ನಡೆಸಲಾಗುತ್ತಿದೆ ಎಂದು ಹೇಳಿದರು. ಚಲನಚಿತ್ರ ಅಕಾಡೆಮಿ ಮಾಜಿ ಅಧ್ಯಕ್ಷ ಆರ್​ವಿ.ಹರೀಶ್​, ಮಾಜಿ ಎಂಎಲ್ಸಿ ಆರ್​ವಿ.ವೆಂಕಟೇಶ್​, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಜ್​ ಕುಮಾರ್​, ನಗರಸಭೆ ಸದಸ್ಯರಾದ ಸುಗುಣಾ ಮೋಹನ್​, ಉಷಾ ಸುದರ್ಶನ್​, ಜಮುನಾ ಹರೀಶ್​ ಸೇರಿ ಕಮ್ಮವಾರಿ ಸಮುದಾಯದ ಮುಖಂಡರು ಇದ್ದರು.

ತಾಲೂಕಿನಲ್ಲಿ 5 ಸಾವಿರಕ್ಕೂ ಹೆಚ್ಚಿನ ಕಮ್ಮ ಸಮುದಾಯದವರಿದ್ದು, ಅಭಿವೃದ್ಧಿ ದೃಷ್ಟಿಯಿಂದ ಈ ಬಾರಿ ಜಾತಿಜನಗಣತಿ ವೇಳೆ ಒಮ್ಮತದಿಂದ ಜಾತಿ ನಮೂದು ಮಾಡಿಸಬೇಕು. ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥಕ್ಕಾಗಿ ಒಡೆದು ಆಳುವ ನೀತಿ ಅನುಸರಿಸುತ್ತವೆ. ಆದರೆ ಸಮುದಾಯದ ಅಭಿವೃದ್ಧಿಗೆ ಹಿನ್ನಡೆ ಆಗದಂತೆ ಜಾತಿ ನಮೂದಿಸಬೇಕು. > ರಾಜಗೋಪಾಲ್​ ನಾಯ್ಡು ಕಮ್ಮವಾರಿ ಸಂದ ಅಧ್ಯಕ್ಷ, ಬೆಂಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net